Friday, 13th December 2024

Dasara Celebration In Movie: ದಸರಾ ಮಹತ್ವ ಸಾರುವ ಬಾಲಿವುಡ್‌ನ 5 ಸಿನಿಮಾಗಳಿವು

Dasara Celebration In Movie

ಹಬ್ಬಗಳ ಆಚರಣೆಯ (Celebration of festivals) ಸೊಬಗನ್ನು ಬಾಲಿವುಡ್‌ನ ಕೆಲವು ಸಿನಿಮಾಗಳಲ್ಲೂ (bollywood Movie) ಸೆರೆ ಹಿಡಿಯಲಾಗಿದೆ. ನಿಜ ಜೀವನದಂತೆಯೇ ಭಾರತೀಯ ಹಬ್ಬ ಮತ್ತು ಆಚರಣೆಗಳನ್ನು ಸಿನಿಮಾಗಳೂ ವೈಭವೀಕರಿಸುತ್ತವೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಅನೇಕ ಬಾಲಿವುಡ್ ಚಲನಚಿತ್ರಗಳು ದಸರಾದ ತತ್ತ್ವವನ್ನು (Dasara Celebration In Movie) ಸಾರುವ ದುಷ್ಟರ ವಿರುದ್ಧ ಒಳ್ಳೆಯದರ ವಿಜಯವನ್ನು ಚಿತ್ರಿಸುವಲ್ಲಿ ಯಶಸ್ವಿಯಾಗಿದೆ. ವಾರಾಂತ್ಯದಲ್ಲಿ ಬಂದಿರುವ ಈ ಬಾರಿಯ ವಿಜಯದಶಮಿಯ (Vijayadashami) ಸಂದರ್ಭದಲ್ಲಿ ಈ ಚಿತ್ರಗಳನ್ನು ನೋಡಿ ಆನಂದಿಸಬಹುದು.

ಕಹಾನಿ

ವಿದ್ಯಾ ಬಾಲನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ʼಕಹಾನಿʼ ಕೆಟ್ಟದ್ದರ ವಿರುದ್ಧ ಒಳ್ಳೆಯವರ ವಿಜಯದ ಚಿತ್ರಗಳಲ್ಲಿ ಒಂದಾಗಿದೆ. ಕೋಲ್ಕತ್ತಾದಲ್ಲಿ ನಡೆದ ದುರ್ಗಾಪೂಜಾ ಆಚರಣೆಯ ಸಂದರ್ಭದಲ್ಲಿ ಕಳೆದುಹೋದ ಪತಿಯನ್ನು ಹುಡುಕಲು ಹೋಗುವ ವಿದ್ಯಾ ಅಂತಿಮವಾಗಿ ಕೊನೆಯ ದಿನ ಅಂದರೆ ದಸರಾ ಅಥವಾ ವಿಜಯ ದಶಮಿಯಂದು ಆಕೆ ತನ್ನ ಪತಿಯ ಸಾವಿನ ಹಿಂದಿನ ಅಪರಾಧಿಯನ್ನು ಕಂಡುಕೊಳ್ಳುತ್ತಾರೆ.

ಸಿಂದೂರ್ ಖೇಲಾದಲ್ಲಿ ವಿದ್ಯಾ ಭಾಗವಹಿಸುವುದು, ದುರ್ಗಾ ವಿಗ್ರಹವನ್ನು ನೀರಿನಲ್ಲಿ ಮುಳುಗಿಸುವುದು, ದುಷ್ಟರನ್ನು ಸೋಲಿಸಿದ ಅನಂತರ ದೇವಿಯು ತನ್ನ ವಾಸಸ್ಥಾನಕ್ಕೆ ಹಿಂದಿರುಗುವುದನ್ನು ಪ್ರತಿನಿಧಿಸುವ ಕೆಲವು ಸಂಪ್ರದಾಯವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.

ಡೆಲ್ಲಿ 6

ಕೆಟ್ಟದ್ದನ್ನು ಒಳ್ಳೆಯದು ಹೇಗೆ ಗೆಲ್ಲುತ್ತದೆ ಎಂಬುದನ್ನು ತೋರಿಸುವ ಚಿತ್ರ ಡೆಲ್ಲಿ- 6ರಲ್ಲಿ ದಸರಾವನ್ನು ಚಿತ್ರಿಸಲಾಗಿದೆ. ಕಾಲಾ ಬಂದರ್‌ನಲ್ಲಿ ನಡೆಯುವ ರಾಮ ಲೀಲಾದ ದೃಶ್ಯಗಳನ್ನು ಸಿನಿಮಾದಲ್ಲಿ ಕಾಣಬಹುದು. ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಸೋನಂ ಕಪೂರ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಗೋಲಿಯೋನ್ ಕಿ ರಾಸ್ ಲೀಲಾ ʼರಾಮ್ ಲೀಲಾʼ

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ನವರಾತ್ರಿಯ ಹತ್ತು ದಿನಗಳ ಸುತ್ತ ಕಥೆಯನ್ನು ನಿರೂಪಿಸಲಾಗಿದೆ. ಸಾಂಪ್ರದಾಯಿಕ ನವರಾತ್ರಿ ಆಚರಣೆ, ಗರ್ಬಾ ನೃತ್ಯದ ದೃಶ್ಯಗಳನ್ನು ಇದರಲ್ಲಿ ಕಣ್ತುಂಬಿಕೊಳ್ಳಬಹುದು. ತಮ್ಮ ಸಮುದಾಯಗಳ ನಡುವಿನ ದ್ವೇಷವನ್ನು ಕೊನೆಗೊಳಿಸಲು ದಸರಾದಲ್ಲಿ ರಾಮ್ ಮತ್ತು ಲೀಲಾ ಗುಂಡು ಹಾರಿಸಿ ದ್ವೇಷದ ಮೇಲಿನ ಪ್ರೀತಿಯ ವಿಜಯವನ್ನು ಎತ್ತಿ ತೋರಿಸುತ್ತಾರೆ.

ರಾ ಒನ್

ಶಾರುಖ್ ಖಾನ್ ಮತ್ತು ಅರ್ಜುನ್ ರಾಂಪಾಲ್ ಅಭಿನಯದ ಈ ಚಿತ್ರವು ಕೆಟ್ಟದ್ದರ ಮೇಲೆ ಒಳ್ಳೆಯ ವಿಜಯದ ಸಂದೇಶವನ್ನು ನೀಡಿದೆ. ದಸರಾ ಆಚರಣೆಯ ಪ್ರಮುಖ ಸಂಪ್ರದಾಯವಾದ ರಾವಣ ಸುಡುವ ಸನ್ನಿವೇಶವನ್ನು ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ.

Natasa Stankovic: ಎಲ್ವಿಶ್ ಯಾದವ್ ಜತೆ ಡೇಟಿಂಗ್‌ ಆರಂಭಿಸಿದರೇ ಪಾಂಡ್ಯ ಮಾಜಿ ಪತ್ನಿ?

ಬಜರಂಗಿ ಭಾಯಿಜಾನ್

ಪಾಕಿಸ್ತಾನದಿಂದ ಬಂದಿರುವ ಬಾಲಕಿಯನ್ನು ಮರಳಿ ಪಾಕಿಸ್ತಾನಕ್ಕೆ ಕಳುಹಿಸುವ ಪರಿಶುದ್ಧ ಹೃದಯದ ಭಾರತೀಯ ವ್ಯಕ್ತಿಯ ಕಥೆಯನ್ನು ಇದು ಒಳಗೊಂಡಿದೆ. ಸಲ್ಮಾನ್ ಖಾನ್ ಅಭಿನಯದ ಈ ಚಿತ್ರದ ತು ಚಾಹಿಯೇ ಹಾಡಿನಲ್ಲಿ ದಸರಾ ಆಚರಣೆಗಳನ್ನು ಕಣ್ತುಂಬಿಕೊಳ್ಳಬಹುದು.