Saturday, 14th December 2024

ದಾವೂದ್ ಸಹೋದರ ಇಕ್ಬಾಲ್ ಕಸ್ಕರ್‌ ಬಂಧನ

ನವದೆಹಲಿ : ದಾವೂದ್ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಮುಖ ಕ್ರಮ ಕೈಗೊಂಡಿದ್ದು, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಕಸ್ಕರ್‌ನನ್ನ ಬಂಧಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಸ್ಕರ್ʼನನ್ನ ಬಂಧಿಸಿದ್ದು, ನಂತರದ ದಿನಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.

2003 ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ʼನಿಂದ ಭಾರತಕ್ಕೆ ಗಡೀಪಾರು ಮಾಡಲ್ಪಟ್ಟ ಕಸ್ಕರ್ʼ ನನ್ನ 2017ರಲ್ಲಿ ಥಾಣೆ ಪೊಲೀಸರ ಸುಲಿಗೆ ವಿರೋಧಿ ಸೆಲ್ ಬಂಧಿಸಿತು ಮತ್ತು ಅಂದಿನಿಂದ ಥಾಣೆ ಕೇಂದ್ರ ಜೈಲಿನಲ್ಲಿ ಇರಿಸಲಾಗಿದೆ. ಇಂದು ಮುಂಬೈನ ಇ.ಡಿ ಕಚೇರಿಗೆ ಕರೆತರಲಾಗಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲಾಗಿದೆ.