Saturday, 14th December 2024

ಡಿಡಿಸಿ ಚುನಾವಣೆ ಮತ ಎಣಿಕೆ ಇಂದು

ಶ್ರೀನಗರ : ಜಮ್ಮು ಕಾಶ್ಮೀರದ ಎರಡು ಪ್ರಾಂತ್ಯಗಳ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಯ ತಲಾ 140 ಸ್ಥಾನಗಳಂತೆ ಒಟ್ಟು 280 ಸ್ಥಾನಗಳಿಗೆ 8 ಹಂತಗಳಲ್ಲಿ ಚುನಾವಣೆ ನಡೆದಿತ್ತು. ಮಂಗಳವಾರ ಎಲ್ಲ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರ ವಾಗಲಿದೆ.

ಜಮ್ಮು ಮತ್ತು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯ ಮತ ಎಣಿಕೆ ಮಂಗಳವಾರ ಬೆಳಗ್ಗೆ 9 ಗಂಟೆಗೆ ಎಲ್ಲಾ 20 ಜಿಲ್ಲೆಗಳಲ್ಲಿ ಪ್ರಾರಂಭವಾಗಲಿದೆ. 280 ಡಿಡಿಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದ 450 ಮಹಿಳೆಯರು ಸೇರಿದಂತೆ 4,181 ಅಭ್ಯರ್ಥಿ ಗಳ ಹಣೆಬರಹ ವನ್ನು ಫಲಿತಾಂಶ ನಿರ್ಧರಿಸಲಿದೆ.

ನ.28 ರಿಂದ ಡಿಸೆಂಬರ್ 19ರ ವರೆಗೆ ಎಂಟು ಹಂತಗಳಲ್ಲಿ ಮತದಾನ ನಡೆದಿತ್ತು. 57 ಲಕ್ಷ ಅರ್ಹ ಮತದಾರರಲ್ಲಿ ಶೇ.51ರಷ್ಟು ಮತದಾನ ಶಾಂತಿಯುತವಾಗಿತ್ತು. 370ನೇ ವಿಧಿಯ ನಿಬಂಧನೆಗಳನ್ನು ರದ್ದುಗೊಳಿಸಿದ ನಂತರ ಮತ್ತು ಜಮ್ಮು ಮತ್ತು ಕಾಶ್ಮೀರ ವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ 2019ರ ಆಗಸ್ಟ್ ನಲ್ಲಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ನಂತರ ನಡೆದ ಮೊದಲ ಸಾಮೂಹಿಕ ಚುನಾವಣೆಯೂ ಆಗಿದೆ.