Friday, 13th December 2024

ತೆರಿಗೆ ಪೋರ್ಟಲ್‌ ತಾಂತ್ರಿಕ ದೋಷ ಪರಿಹರಿಸಲು ಸೆಪ್ಟೆಂಬರ್ 15ರವರೆಗೆ ಡೆಡ್‌ಲೈನ್

ನವದೆಹಲಿ: ಹೊಸ ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಮುಂದುವರಿದ ತಾಂತ್ರಿಕ ದೋಷ ಪರಿಹರಿಸಲು ಇನ್ಫೋಸಿಸ್‌ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೆಪ್ಟೆಂಬರ್ 15ರವರೆಗೆ ಡೆಡ್‌ಲೈನ್ ನೀಡಿದ್ದಾರೆ.

ಇ-ಪೋರ್ಟಲ್‌ ಕಾರ್ಯಾರಂಭ ಆರಂಭಿಸಿದ ಎರಡು ತಿಂಗಳು ಕಳೆದರೂ ತಾಂತ್ರಿಕ ಸಮಸ್ಯೆಗಳು ಬಗೆಹರಿ ದಿಲ್ಲ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್‌ಗೆ ಆ.23ರಂದು ಹಣಕಾಸು ಇಲಾಖೆ ಸಮನ್ಸ್‌ ನೀಡಿತ್ತು. ಸಮನ್ಸ್‌ಗೆ ಸೋಮವಾರ ಪರೇಖ್‌ ಹಾಜರಾಗಿದ್ದರು.

ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇನ್ಫೋಸಿಸ್ ನಡೆಗೆ ತೀವ್ರ ನಿರಾಸೆ ವ್ಯಕ್ತಪಡಿಸಿ ದರು. ಪೋರ್ಟಲ್ ಉದ್ಘಾಟನೆಯಾಗಿ ಎರಡೂವರೆ ತಿಂಗಳು ಕಳೆದರೂ, ತಾಂತ್ರಿಕ ದೋಷ ಪರಿಹರಿಸಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಪರೇಖ್‌ ಜತೆ ಕಂಪನಿಯ ಭಾರತದ ಉದ್ಯಮದ ಮುಖ್ಯಸ್ಥ ಸಿಎನ್‌ ರಘುಪತಿ ಕೂಡ ಉಪಸ್ಥಿತರಿದ್ದರು.

ಸಮನ್ಸ್‌ಗೆ ಉತ್ತರಿಸಿದ ಸಲೀಲ್ ಪರೇಖ್, ಪೋರ್ಟಲ್‌ನಲ್ಲಿರುವ ತಾಂತ್ರಿಕ ದೋಷದ ಮಾಹಿತಿ ನೀಡಿದ್ದಾರೆ. ಬಳಿಕ ಇಷ್ಟಲ್ಲದೆ ಪೋರ್ಟಲ್‌ನಲ್ಲಿನ ಎಲ್ಲಾ ಸಮಸ್ಯೆ ನಿವಾರಿಸುವ ಕುರಿತು ರೋಡ್ ಮ್ಯಾಪ್ ನೀಡಿದ್ದಾರೆ.

2019ರಲ್ಲಿ ಇನ್ಫೋಸಿಸ್‌ಗೆ ಈ ಪೋರ್ಟಲ್‌ನ ಟೆಂಡರ್‌ನ್ನು 4,242 ಕೋಟಿ ರೂ.ಗೆ ನೀಡಲಾಗಿತ್ತು. ಆದಾಯ ತೆರಿಗೆ ರಿಟರ್ನ್ಸ್‌ಗಳ ಪ್ರೊಸೆಸಿಂಗ್‌ ಅವಧಿಯನ್ನು 63 ದಿನಗಳಿಂದ 1 ದಿನಕ್ಕೆ ಇಳಿಕೆ ಮಾಡುವ ಗುರಿಯನ್ನು ಈ ಸಂದರ್ಭದಲ್ಲಿ ಇನ್ಫೋಸಿಸ್‌ಗೆ ನೀಡಲಾಗಿತ್ತು.