Tuesday, 12th November 2024

Deepavali Horoscope 2024: ಯಾವ ರಾಶಿಯವರು ಯಾವ ರೀತಿ ದೀಪ ಬೆಳಗಿಸಿದರೆ ಶುಭ ಫಲ ಪಡೆಯಬಹುದು?

Deepavali Horoscope 2024

ಬೆಳಕಿನ ಹಬ್ಬ ದೀಪಾವಳಿಯು (deepavali) ಎಲ್ಲರಿಗೂ ಶುಭಫಲ ತರಲಿ ಎನ್ನುವ ನೀರಿಕ್ಷೆ ಇದ್ದೇ ಇರುತ್ತದೆ. ಈ ವರ್ಷ ಹಲವು ರಾಶಿಯವರಿಗೆ ದೀಪಾವಳಿ ವಿಶೇಷವಾಗಿದೆ. ಈ ಬಾರಿ ದೀಪಾವಳಿ ಜಾತಕದಲ್ಲಿ (Deepavali Horoscope 2024) ಏನಿದೆ, ಯಾವ ರಾಶಿಯವರು ಏನು ಮಾಡಿದರೆ ಶುಭಫಲ ಪಡೆಯಬಹುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಮೇಷ

ಈ ರಾಶಿಯವರು ಸಕಾರಾತ್ಮಕ ಶಕ್ತಿ ಮತ್ತು ಉತ್ಸಾಹವನ್ನು ಹೊಂದಿರುತ್ತಾರೆ. ದೀಪಾವಳಿ ಆಚರಣೆ ವೇಳೆ ಪೂರ್ವದಲ್ಲಿ ದೀಪವನ್ನು ಬೆಳಗಿಸುವುದರಿಂದ ಹೊಸ ಆರಂಭವನ್ನು ಸ್ವೀಕರಿಸಲು ಮತ್ತು ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೋಮ, ಹವನಗಳಲ್ಲಿ ಭಾಗವಹಿಸುವುದು, ಕರ್ಪೂರವನ್ನು ಸುಡುವುದು ಇವರ ನಕಾರಾತ್ಮಕತೆಯನ್ನು ತೊಡೆದುಹಾಕುತ್ತದೆ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ.

ವೃಷಭ

ಈ ರಾಶಿಯವರು ಐಹಿಕ ಸಂತೋಷ ಮತ್ತು ಸ್ಥಿರತೆಯನ್ನು ಹೊಂದಿರುತ್ತಾರೆ. ಈ ದೀಪಾವಳಿಯಲ್ಲಿ ಮನೆಯ ಸುತ್ತಲೂ ಪರಿಮಳಯುಕ್ತ ಹೂವು ಮತ್ತು ಧೂಪದ್ರವ್ಯವನ್ನು ಸೇರಿಸುವುದರಿಂದ ಶುಕ್ರನ ಆಶೀರ್ವಾದವನ್ನು ಆಹ್ವಾನಿಸಬಹುದು. ಲಕ್ಷ್ಮಿ ಪೂಜೆಯ ಸಮಯದಲ್ಲಿ ತಾಜಾ ಹೂವು ಮತ್ತು ಶ್ರೀಗಂಧ ಬಳಸುವುದರಿಂದ ಸಮೃದ್ಧಿ ವೃದ್ಧಿಸುತ್ತದೆ. ಆಗ್ನೇಯ ಮೂಲೆಯಲ್ಲಿ ತುಪ್ಪದ ದೀಪಗಳನ್ನು ಬೆಳಗಿಸುವುದು ಮನೆಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ.

Deepavali Horoscope 2024

ಮಿಥುನ

ಈ ರಾಶಿಯವರು ಅತ್ಯಂತ ಬುದ್ಧಿವಂತರು ಮತ್ತು ಹೊಂದಿಕೊಳ್ಳುವ ಗುಣದವರಾಗಿದ್ದಾರೆ. ಕಲಿಕೆ ಮತ್ತು ಸಂವಹನವನ್ನು ಇಷ್ಟಪಡುವ ಇವರು ವಾಯವ್ಯ ದಿಕ್ಕಿನಲ್ಲಿ ಒಂದು ದೀಪವನ್ನು ಬೆಳಗಿಸಬೇಕು. ಇದರಿಂದ ಮನೆಗೆ ಸಮೃದ್ಧಿ ಮತ್ತು ಸಾಮರಸ್ಯವನ್ನು ಆಹ್ವಾನಿಸಬಹುದು.

ಕರ್ಕಾಟಕ

ಈ ರಾಶಿಯವರು ಕುಟುಂಬ ಮತ್ತು ಭದ್ರತೆಗೆ ಹೆಚ್ಚು ಒತ್ತು ನೀಡುತ್ತಾರೆ. ಈ ದೀಪಾವಳಿಯಲ್ಲಿ ಮನೆಗೆ ಆಧ್ಯಾತ್ಮಿಕ ಶಕ್ತಿ ಮತ್ತು ಶಾಂತಿಯನ್ನು ಸ್ವಾಗತಿಸಲು ಈಶಾನ್ಯ ದಿಕ್ಕಿನಲ್ಲಿ ದೀಪವನ್ನು ಬೆಳಗಿಸುವತ್ತ ಗಮನಹರಿಸಬೇಕು. ದೀಪಾವಳಿಯ ದಿನ ಬೆಳಗ್ಗೆ ಶಿವನಿಗೆ ಕ್ಷೀರ ಅಭಿಷೇಕ ಮಾಡಿಸುವುದರಿಂದ ಆಂತರಿಕ ಶಕ್ತಿಯನ್ನು ವೃದ್ಧಿಸುತ್ತದೆ. ಭಾವನೆಗಳನ್ನು ಶಾಂತಗೊಳಿಸಲು ಇದು ಸಹಾಯ ಮಾಡುತ್ತದೆ.

ಸಿಂಹ

ಸೂರ್ಯನಿಂದ ಆಳಲ್ಪಡುವ ಸಿಂಹ ರಾಶಿಯ ಆತ್ಮವಿಶ್ವಾಸವುಳ್ಳವರು ಮತ್ತು ನಾಯಕತ್ವ ಗುಣವುಳ್ಳವರು ಅಗಿದ್ದಾರೆ. ಈ ದೀಪಾವಳಿಯಲ್ಲಿ , ಮನೆಯಲ್ಲಿ ಪ್ರಕಾಶಮಾನವಾದ ದೀಪವನ್ನು ಮನೆಯ ಮಧ್ಯ ಭಾಗದಲ್ಲಿ ಇರಿಸುವುದರಿಂದ ಯಶಸ್ಸು ನಿಮ್ಮತ್ತ ಸೆಳೆಯುತ್ತದೆ. ಮನೆಯ ಮುಂಭಾಗದ ಬಾಗಿಲಿನ ಬಳಿ ದೀಪವನ್ನು ಬೆಳಗಿಸುವುದು ಅದೃಷ್ಟವನ್ನು ಆಹ್ವಾನಿಸುತ್ತದೆ. ಲಕ್ಷ್ಮಿ ದೇವಿಯನ್ನು ಗೌರವಿಸುವುದು, ಚಿನ್ನ, ಹಳದಿ ಅಥವಾ ಕಿತ್ತಳೆ ಬಣ್ಣಗಳ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರಿಂದ ಈ ರಾಶಿಯವರತ್ತ ಗೌರವ ಮತ್ತು ಸಂಪತ್ತು ಆಕರ್ಷಿಸುತ್ತದೆ.

ಕನ್ಯಾ

ಅಧ್ಯಯನದ ಪ್ರದೇಶದಲ್ಲಿ ದೀಪವನ್ನು ಬೆಳಗಿಸುವುದು ಈ ರಾಶಿಯವರಿಗೆ ಶುಭವಾಗಿದೆ. ಬುಧನ ಧನಾತ್ಮಕ ಪ್ರಭಾವವನ್ನು ಪಡೆಯಲು ಹಣ್ಣು ಅಥವಾ ತರಕಾರಿಗಳಂತಹ ಹಸಿರು ಬಣ್ಣದ ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಕು. ಗಣೇಶ ಪೂಜೆಯನ್ನು ಮಾಡುವುದರಿಂದ ಶಿಕ್ಷಣ ಅಥವಾ ಕೆಲಸದಲ್ಲಿನ ಅಡೆತಡೆಗಳನ್ನು ತೆಗೆದುಹಾಕಬಹುದು.

ತುಲಾ

ಸೌಂದರ್ಯ, ಸಾಮರಸ್ಯ ಮತ್ತು ಸಂಬಂಧಗಳ ಕಡೆಗೆ ಇವರ ಒಲವಿರುತ್ತದೆ. ಮನೆಯನ್ನು ದೀಪ, ಹೂವು, ರಂಗೋಲಿಗಳಿಂದ ಅಲಂಕರಿಸುವ ಮೂಲಕ ದೀಪಾವಳಿ ಹಬ್ಬದ ಆಚರಣೆ ಶುಭ ತರುತ್ತದೆ. ವಾಯುವ್ಯ ದಿಕ್ಕಿನಲ್ಲಿ ದೀಪವನ್ನು ಬೆಳಗಿಸುವುದು, ಆತ್ಮೀಯ ಸ್ನೇಹಿತರು, ಕುಟುಂಬ ಸದಸ್ಯರಿಗೆ ಉಡುಗೊರೆ, ಸಿಹಿ ತಿಂಡಿಗಳನ್ನು ನೀಡುವುದರಿಂದ ಸಂಬಂಧಗಳು ಬಲವಾಗುತ್ತದೆ.

Deepavali Horoscope 2024

ವೃಶ್ಚಿಕ

ಈ ಬಾರಿ ದೀಪಾವಳಿಯಲ್ಲಿ ಮನೆಯ ಪ್ರಶಾಂತ ಪ್ರದೇಶದಲ್ಲಿ ದೀಪವನ್ನು ಬೆಳಗಿಸಬೇಕು. ಇದು ಮನೆಗೆ ಶೌರ್ಯ ಮತ್ತು ಚೈತನ್ಯವನ್ನು ಸ್ವಾಗತಿಸುತ್ತದೆ. ಕೆಂಪು ಅಥವಾ ಗಾಢ ಬಣ್ಣದ ದೀಪವನ್ನು ಬೆಳಗಿಸುವುದು, ಶಿವಲಿಂಗಕ್ಕೆ ಅಭಿಷೇಕ ಮಾಡಿಸುವುದು ಭಾವನಾತ್ಮಕ ಒತ್ತಡವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.

ಧನು

ಗುರುವಿನ ಆಶೀರ್ವಾದ ಪಡೆಯಲು ಹಳದಿ, ಕೇಸರಿ ಹೂವುಗಳಿಂದ ಮನೆಯನ್ನು ಅಲಂಕರಿಸಿ. ಈಶಾನ್ಯ ದಿಕ್ಕಿನಲ್ಲಿ ಒಂದು ದೀಪವನ್ನು ಬೆಳಗಿಸಿ. ವಿಷ್ಣು ಸಹಸ್ರನಾಮವನ್ನು ಪಠಿಸಿ. ಇದರಿಂದ ಶುಭ ಉಂಟಾಗುವುದು.

ಮಕರ

ಈ ರಾಶಿಯವರು ಸ್ಥಿರತೆ ಮತ್ತು ಶಿಸ್ತುನಿಂದ ಖ್ಯಾತಿ ಪಡೆದಿರುತ್ತಾರೆ. ಈ ದೀಪಾವಳಿಯಲ್ಲಿ ಸಂಪತ್ತನ್ನು ಆಕರ್ಷಿಸಲು ಕೆಲಸದ ಮೇಜಿನ ಬಳಿ ಅಥವಾ ಹಣಕಾಸಿನ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಸ್ಥಳದಲ್ಲಿ ದೀಪವನ್ನು ಬೆಳಗಿಸಿ. ದಕ್ಷಿಣ ದಿಕ್ಕಿನಲ್ಲಿ ದೀಪವನ್ನು ಬೆಳಗಿಸಿ ಶನಿ ಅಥವಾ ಹನುಮಂತನ ಮಂತ್ರಗಳನ್ನು ಪಠಿಸಿ.

ಕುಂಭ

ಈ ದೀಪಾವಳಿಯಲ್ಲಿ ಆಧ್ಯಾತ್ಮಿಕ ಮತ್ತು ಮಾನವೀಯ ತತ್ತ್ವಗಳನ್ನು ಗೌರವಿಸಿ. ಉತ್ತರ ದಿಕ್ಕಿನಲ್ಲಿ ದೀಪವನ್ನು ಬೆಳಗಿಸುವುದು ಭವಿಷ್ಯದ ಸಾಧನೆಗೆ ನಿಮಗೆ ದಾರಿ ತೋರುತ್ತದೆ. ವೈಯಕ್ತಿಕವಾಗಿ ಮತ್ತು ಸಮುದಾಯ ಜೀವನದಲ್ಲಿ ಅಭಿವೃದ್ಧಿಯತ್ತ ನಿಮ್ಮಣ್ಣಿ ಸೆಳೆಯುತ್ತದೆ. ಭಗವಾನ್ ಶಿವನನ್ನು ಧ್ಯಾನಿಸುವುದು ಹಿಂದಿನ ಕರ್ಮಗಳಿಂದ ನಿಮಗೆ ಬಿಡುಗಡೆ ನೀಡುತ್ತದೆ. ಆಧ್ಯಾತ್ಮಿಕತೆಯ ಮೂಲಕ ಉದ್ದೇಶಪೂರ್ವಕ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ.

Vastu Tips: ಕನಸಿನಲ್ಲಿ ನೀರು ಕಂಡರೆ ಶುಭವೇ ಅಥವಾ ಅಶುಭವೇ?

ಮೀನ

ಕಾರಂಜಿ ಅಥವಾ ನೀರಿನ ಸಮೀಪ ದೀಪವನ್ನು ಬೆಳಗಿಸುವುದು, ವಿಷ್ಣುವಿನ ಧ್ಯಾನ ಮಾಡುವುದು, ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಸುಖ, ಶಾಂತಿ, ಸಾಮರಸ್ಯವನ್ನು ಪಡೆಯಬಹುದು. ಇದು ದೈವಿಕ ರಕ್ಷಣೆಯನ್ನು ನಿಮಗೆ ಒದಗಿಸುತ್ತದೆ.