Sunday, 13th October 2024

ಜಾವೇದ್ ಅಖ್ತರ್ ವಿರುದ್ದ ರೂ. 100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲು

ನವದೆಹಲಿ: ಗೀತಕಾರ ಜಾವೇದ್ ಅಖ್ತರ್ ಅವರು ಮತ್ತೊಂದು ಸಮಸ್ಯೆಗೆ ಸಿಲುಕಿದಂತೆ ತೋರುತ್ತದೆ. ಆರ‍್.ಎಸ್.ಎಸ್ ನ್ನು ಭಯೋತ್ಪಾದಕ ಗುಂಪು ತಾಲಿಬಾನ್ ಗೆ ಹೋಲಿಸುವ ಮೂಲಕ ಕಿರಿಕ್ ಮಾಡಿಕೊಂಡಿ ದ್ದಾರೆ.

ತಾನಿಬಾಗ್’ಗೆ ಹೋಲಿಸಿದ ಹೇಳಿಕೆಗಾಗಿ ಅವರ ವಿರುದ್ಧ ಕ್ರಿಮಿನಲ್ ಮಾನನಷ್ಟ ದೂರು ಸಲ್ಲಿಸಿದ ಸಂದರ್ಭ ದಲ್ಲಿ, ಮತ್ತೊಬ್ಬ ವಕೀಲರು ರೂ. 100 ಕೋಟಿ ರೂಪಾಯಿಗಳನ್ನು ಮಾನ ನಷ್ಟ ಮೊಕದ್ದಮೆ ಹೂಡಿದ್ದಾರೆ. ಸಂಘದೊಂದಿಗೆ ಸಂಬಂಧ ಹೊಂದಿದ್ದ ವಕೀಲ ಧತಿಮನ್ ಜೋಶಿ ಕುರ್ಲಾ ನ್ಯಾಯಾಲಯದಲ್ಲಿ ಅಖ್ತರ್ ವಿರುದ್ಧ ದೂರು ಸಲ್ಲಿಸಿದ್ದಾರೆ.

ಜೋಶಿ ಅವರು ಸೆಪ್ಟೆಂಬರ್ 4 ರಂದು ಒಂದು ಪ್ರೋಗ್ರಾಂ ಅನ್ನು ನೋಡಿದ್ದೇನೆ. ಇದರಲ್ಲಿ ಭಯೋತ್ಪಾದಕ ಗುಂಪಿನ ತಾಲಿಬಾನ್ ಗೆ ಆರ್‌.ಎಸ್.ಎಸ್ ಅನ್ನು ಹೋಲಿಸಿದ್ದಾರೆ. ಅಖ್ತರ್ ಈ ಹೇಳಿಕೆಯನ್ನು ಉದ್ದೇಶ ಪೂರ್ವಕವಾಗಿ ಹೇಳಿದ್ದಾರೆ. ಸಂಘಕ್ಕೆ ಸೇರ್ಪಡೆಗೊಳ್ಳುವವರಿಗೆ ಗೊಂದಲಕ್ಕೊಳಗಾಗುವಂತೆ ಮಾಡಿದೆ ಎಂದು ಹೇಳಿದರು.

ಯಾವುದೇ ಸಾಕ್ಷಿಗಳು ಇಲ್ಲದೇ ಆರ್​ಎಸ್​ಎಸ್​ ಬಗ್ಗೆ ಜಾವೇದ್​ ಅಖ್ತರ್​ ಅವರು ಇಂಥ ಮಾತುಗಳನ್ನು ಆಡಿದ್ದಾರೆ. ಪ್ರಧಾನಮಂತ್ರಿ, ರಾಷ್ಟ್ರಪತಿ ಮತ್ತು ಕೇಂದ್ರದ ಅನೇಕ ಮಂತ್ರಿಗಳು ಆರ್​ಎಸ್​ಎಸ್​ ಬೆಂಬಲಿಗರಾಗಿದ್ದಾರೆ. ಅಂಥ ಸಂಘಟನೆ ಬಗ್ಗೆ ಜಾವೇದ್​ ಅಖ್ತರ್​ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ’ ಎಂದು ಆರೋಪಿಸಲಾಗಿದೆ.