Saturday, 23rd November 2024

ರಾಗಾ ವಿರುದ್ಧ ಮಾನನಷ್ಟ ಮೊಕದ್ದಮೆ ವಿಚಾರಣೆ ಡಿ.3 ಕ್ಕೆ

ಠಾಣೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ದಾಖಲಿಸಿರುವ ಮಾನನಷ್ಟ ಮೊಕದ್ದಮೆ ವಿಚಾರಣೆಯನ್ನು ಶನಿವಾರ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಭಿವಂಡಿಯ ನ್ಯಾಯಾಲಯ ಡಿ.3ಕ್ಕೆ ಮುಂದೂಡಿದೆ.

ಆರ್‌ಎಸ್‌ಎಸ್ ಕಾರ್ಯಕರ್ತ ರಾಜೇಶ್ ಕುಂಟೆ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಜಂಟಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಜೆಎಂಎಫ್‌ಸಿ) ಎಲ್. ಸಿ. ವಾಡಿಕರ್ ವಿಚಾರಣೆ ನಡೆಸು ತ್ತಿದ್ದಾರೆ.

ಮುಂದಿನ ವಿಚಾರಣೆ ವೇಳೆ, ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ಕೋರಿರುವ ರಾಹುಲ್‌ ಅವರ ಮನವಿಯನ್ನೂ ಕೋರ್ಟ್‌ ಆಲಿಸಲಿದೆ.

ಮಹಾತ್ಮಾ ಗಾಂಧಿ ಹತ್ಯೆ ಹಿಂದೆ ಆರ್‌ಎಸ್‌ಎಸ್ ಕೈವಾಡವಿದೆ ಎಂದು ಭಿವಂಡಿಯಲ್ಲಿ ರಾಹುಲ್ ಭಾಷಣದ ವೇಳೆ ಆರೋಪಿಸಿ ದ್ದರು. ನಂತರ ಕುಂಟೆ ಅವರು 2014ರಲ್ಲಿ ಪ್ರಕರಣ ದಾಖಲಿಸಿದ್ದರು.