Wednesday, 11th December 2024

‘ಸ್ವಿಚ್‌ ದೆಹಲಿ’ ಅಭಿಯಾನಕ್ಕೆ ದೆಹಲಿ ಸಿಎಂ ಚಾಲನೆ

ನವದೆಹಲಿ: ರಾಜಧಾನಿಯಲ್ಲಿ ಎಲೆಕ್ಟ್ರಿಕ್‌ ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗುರುವಾರ ‘ಸ್ವಿಚ್‌ ದೆಹಲಿ’ ಅಭಿಯಾನಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಚಾಲನೆ ನೀಡಿದರು. ‘ನಗರದಲ್ಲಿ ಮಾಲಿನ್ಯ ನಿಯಂತ್ರಿಸಲು ಜನರು ಎಲೆಕ್ಟ್ರಿಕ್‌ ವಾಹನಗಳನ್ನು ಉಪಯೋಗಿಸಬೇಕು’ ಎಂದು ಮನವಿ ಮಾಡಿದರು.

ಸರ್ಕಾರವು ಮುಂದಿನ ಆರು ವಾರಗಳಲ್ಲಿ ವಿವಿಧ ಕಾರ್ಯಗಳಿಗಾಗಿ ಕೇವಲ ಎಲೆಕ್ಟ್ರಿಕ್‌ ವಾಹನಗಳನ್ನು ಮಾತ್ರ ಬಾಡಿಗೆಗೆ ಪಡೆಯಲಿದೆ’ ಎಂದು ತಿಳಿಸಿದರು.

ದೊಡ್ಡ ಕಂಪನಿಗಳು ಸೇರಿದಂತೆ ಮಾಲ್‌ಗಳು ಮತ್ತು ಚಿತ್ರ ಮಂದಿರಗಳು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಬೇಕು. ಇದಕ್ಕಾಗಿ ಸಂಸ್ಥೆಯ ಆವರಣದಲ್ಲಿ ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಸ್ಥಾಪಿಸಬೇಕು’ ಎಂದು ಕೋರಿದರು.

‘ಸ್ವಿಚ್‌ ದೆಹಲಿ’ ಅಭಿಯಾನದಡಿ, ಎಲೆಕ್ಟ್ರಿಕ್‌ ವಾಹನದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುವುದು. ಈ ಬೆಳವಣಿಗೆ ದೆಹಲಿಯನ್ನು ಸ್ವಚ್ಛ ಮತ್ತು ಮಾಲಿನ್ಯ ಮುಕ್ತ ನಗರವನ್ನಾಗಿ ಪರಿವರ್ತಿಸುವಲ್ಲಿ ಸಹಾಯ ಮಾಡಲಿದೆ. ಜನರು ಎಲೆಕ್ಟ್ರಿಕ್‌ ವಾಹನವನ್ನು ಬಳಸುವ ಮೂಲಕ ಈ ಅಭಿಯಾನ ದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.

ದೆಹಲಿ ಸರ್ಕಾರವು ಎಲೆಕ್ಟ್ರಿಕ್‌ ವಾಹನದ ಬಳಕೆದಾರರಿಗೆ ರಸ್ತೆ ತೆರಿಗೆ ಮತ್ತು ನೋಂದಣಿ ತೆರಿಗೆ ಮುಕ್ತ ಮಾಡಲಿದೆ.