ನವದೆಹಲಿ: ರೈತರು ಹೊಲಗಳಲ್ಲಿ ಹುಲ್ಲು ಸುಡುವುದು ರಾಜಧಾನಿ ಪ್ರದೇಶದ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದ್ದು, ಹುಲ್ಲು ಸುಡುವ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನಿರಾಕರಿಸಿ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ದೆಹಲಿ ವಾಯುಗುಣ ದಿನದಿಂದ ದಿನಕ್ಕೆ ಹಾಳಾಗುತ್ತಲೇ ಇದೆ. ವಾಯುಗುಣ ತೀವ್ರವಾಗಿ ಹದಗೆಟ್ಟಾಗ ಶಾಲಾ-ಕಾಲೇಜಯಗಳಿಗೆ ರಜೆ ನೀಡಲಾಗುತ್ತಿದೆ. ನಗರದಲ್ಲಿ ನಡೆಯುವ ಕಟ್ಟಡ ಕಾಮಗಾರಿಗಳಿಗೆ ನಿಷೇಧ ಹೇರಲಾಗುತ್ತಿದೆ. ವಾಯು ಮಾಲಿನ್ಯ ಹಾಳಾಗಲು ಮುಖ್ಯ ಕಾರಾಣರೈತರು ಹುಲ್ಲು ಸುಡು ವುದು. ದೆಹಲಿಯ ಸುತ್ತಮುತ್ತಲ ಹಳ್ಳಿಗಳ ರೈತಿಗೆ ಹುಲ್ಲು ಸುಡುವುದನ್ನು ನಿಲ್ಲಿಸಲು ಹಲವು ಬಾರಿ ಸೂಚನೆ ನೀಡಿದರು ಯಾವುದೇ ಪ್ರಯೋಜನ ವಾಗಿಲ್ಲ. ಹೀಗಾಗಿ, ಹುಲ್ಲು ಸುಡುವುದನ್ನು ನಿಲ್ಲಿಸಲು ನಿರಾಕರಿಸುವ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಪ್ರಯೋಜನವನ್ನು ನಿರಾಕರಿಸಬೇಕು ಎಂದು ಸುಪ್ರೀಂಕೋರ್ಟ್ ಸಲಹೆ ಮಾಡಿದೆ.
ಜನರಿಗೆ ಅದರಲ್ಲೂ ಮುಖ್ಯವಾಗಿ ಮಕ್ಕಳ ಜೀವದ ಮೇಲೆ ದುಷ್ಪರಿಣಾಮ ಬೀರುವ ಕ್ರಮ ಸ್ಥಗಿತಗೊಳಿಸುವಂತೆ ನೀಡಿರುವ ಆದೇಶವನ್ನು ಉಲ್ಲಂಘಿಸುವ ಮತ್ತು ಬೆಂಕಿ ಹಾಕುವ ರೈತರ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯಡಿ ಏಕೆ ಖರೀದಿಸಬೇಕು?” ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.
ಮಾಲಿನ್ಯ ತಡೆಗೆ ನ್ಯಾಯಾಲಯ ಇಷ್ಟೊಂದು ಸಲಹೆಗಳನ್ನು ನೀಡಿದರೂ, ನಿಯಮ ಉಲ್ಲಂಘಿಸುವುದನ್ನು ಮುಂದುವರಿಸಿರುವವರಿಗೆ ಹಣಕಾಸು ನೆರವು ಏಕೆ ನೀಡಬೇಕು? ಹೊಲಗಳಲ್ಲಿ ಬೆಂಕಿ ಹಾಕಿ ಹುಲ್ಲು ಸುಡುವ ರೈತರನ್ನು ಗುರುತಿಸಿ ಅವರ ಉತ್ಪನ್ನಗಳನ್ನು ಈ ವ್ಯವಸ್ಥೆಯಡಿ ಮಾರಾಟ ಮಾಡಲು ಅವಕಾಶ ನೀಡಬಾರದು. ಅವರಿಗೂ ಅದರ ಬಿಸಿ ತಟ್ಟುವಂತಾಗಬೇಕು” ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧೂಲಿಯಾ ಅವರನ್ನೊಳಗೊಂಡ ನ್ಯಾಯಪೀಠ ಸ್ಪಷ್ಟಪಡಿಸಿದೆ.