Wednesday, 9th October 2024

ಅಶಿಸ್ತಿನ ವರ್ತನೆ: ಡೆರೆಕ್ ಒ’ಬ್ರಿಯಾನ್ ಅಧಿವೇಶನದಿಂದ ಅಮಾನತು

ನವದೆಹಲಿ: ರಾಜ್ಯಸಭೆಯಲ್ಲಿ ಅಶಿಸ್ತಿನ ವರ್ತನೆ ತೋರಿಸಿದ ಹಿನ್ನೆಲೆಯಲ್ಲಿ ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯಾನ್ ಅವರನ್ನು ಅಧಿವೇಶದಿಂದ ಅಮಾನತು ಮಾಡಲಾಗಿದೆ.
ತೃಣಮೂಲದ ಡೆರೆಕ್ ಒ’ಬ್ರಿಯಾನ್ ಅವರನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ ಎಂದು ಸದನದ ಅಧ್ಯಕ್ಷ ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧನ್ಖರ್ ಅವರು ಘೋಷಿಸಿದ್ದಾರೆ.