ಮಹಾರಾಷ್ಟ್ರ: ಒಎಫ್‌ಎ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಕಟ್ಟಡದ ಪ್ಯಾರಾಫೀಟ್ ನಲ್ಲಿ ಮಹಿಳೆಯೊಬ್ಬರು ಕುಳಿತಿರುತ್ತಾರೆ. ಅಲ್ಲಿಗೆ ಆಕೆಯ ಸ್ನೇಹಿತ (ಸಹೋದ್ಯೋಗಿ) ಆಕೆಯನ್ನು ಅಪ್ಪಿಕೊಂಡು ತಳ್ಳುವಂತೆ ಫ್ರಾಂಕ್ ಮಾಡುತ್ತಾನೆ.
ಮಹಿಳೆಯು ಕಟ್ಟಡದಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದು, ತನ್ನೊಂದಿಗೆ ಕೆಲಸ ಮಾಡುವವರ ಜತೆ ಆಕೆ ತಮಾಷೆಯಾಗಿ ಹರಟುತ್ತಿದ್ದರು. ಈ ವೇಳೆ, ಅವರ ಸಹೋದ್ಯೋಗಿಯೊಬ್ಬ ಆಕೆಯನ್ನು ಅಪ್ಪಿಕೊಳ್ಳಲು ಹೋದಂತೆ ವಿಡಿಯೋದಲ್ಲಿ ಕಾಣಿಸಿದೆ. ಪರಿಣಾಮ ಇಬ್ಬರು ಕೂಡ ಆಯ ತಪ್ಪಿ ಬಿದ್ದಿದ್ದು, ಪುರುಷ ಕಟ್ಟಡದ ಪ್ಯಾರಾಫೀಟ್ ಹಿಡಿದು ಬಚಾವ್ ಆಗುತ್ತಾನೆ. ಆದರೆ ಮಹಿಳೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಡುತ್ತಾಳೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.