Wednesday, 11th December 2024

ಭಾರತದ ಗ್ರಾಹಕರಲ್ಲಿ ಚಲನೆಯಲ್ಲಿ ಬಳಸುವ ಸಾಧನಗಳಲ್ಲಿ ಕಂಟೆಂಟ್ ಬಳಕೆಗೆ ಸ್ಪೇಷಿಯಲ್ ಆಡಿಯೊ

• ಸ್ಮಾರ್ಟ್ಫೋನ್ ಅಥವಾ ಚಲನೆಯಲ್ಲಿ ಬಳಸುವ ಸಾಧನಗಳನ್ನು ಆಯ್ಕೆ ಮಾಡುವಾಗ ಗ್ರಾಹಕರು ಗುಣಮಟ್ಟ ಧ್ವನಿಗೆ ಅತ್ಯಂತ ಪ್ರಮುಖ ಆದ್ಯತೆ ನೀಡುತ್ತಾರೆ
• ಪ್ರತಿ ಐವರಲ್ಲಿ ನಾಲ್ಕು ಮಂದಿ ಗ್ರಾಹಕರು ಹೇಳಿದಂತೆ ಉತ್ತಮ ಶಬ್ದ ಹಾಗೂ ಚಿತ್ರದ ಗುಣಮಟ್ಟ ಅವರ ವಿಡಿಯೋ ಕಂಟೆಂಟ್ ಬಳಕೆಯನ್ನು ಹೆಚ್ಚಿಸುತ್ತದೆ
• ಪ್ರತಿ ಆರು ಮಂದಿ ಬಳಕೆದಾರರಲ್ಲಿ ಐದು ಮಂದಿ ಹೇಳಿದಂತೆ ಡಾಲ್ಬಿ ಅಟ್ಮೊಸ್/ಡಾಲ್ಬಿ ವಿಷನ್ ಅವರ ಮೊಬೈಲ್ ಮನರಂಜನೆಯ ಬಳಕೆಯನ್ನು ಹೆಚ್ಚಿಸುತ್ತದೆ
• ಪ್ರತಿ ಎಂಟು ಮಂದಿ ಬಳಕೆದಾರರಲ್ಲಿ ಏಳು ಮಂದಿ ಹೇಳಿದಂತೆ ಡಾಲ್ಬಿ ಅಟ್ಮೊಸ್/ಡಾಲ್ಬಿ ವಿಷನ್ ಅವರನ್ನು ಅವರ ಸಂಗೀತ/ವಿಡಿಯೋ ಸೇವೆಯ ಚಂದಾದಾರಿಕೆ ನಿರ್ಧರಿಸಲು ಪ್ರೇರೇಪಿಸುತ್ತದೆ

ನವದೆಹಲಿ/ಗುರ್‌ಗಾಂವ್: ಸ್ಮಾರ್ಟ್ ಫೋನ್ ಗಳು ಮತ್ತಿತರೆ ಚಲನೆಯಲ್ಲಿ ಬಳಸುವ ಡಿವೈಸ್ ಗಳನ್ನು ಒಳಗೊಂಡು ಟ್ಯಾಬ್ಲೆಟ್ ಗಳು ಮತ್ತು ಆಲಿಸಬಲ್ಲ ಸಾಧನಗಳು, ಸಾಂಕ್ರಾಮಿಕದ ವರ್ಷಗಳಲ್ಲಿ ಅವುಗಳ ತಲ್ಲೀನಗೊಳಿಸುವ ಧ್ವನಿಯ ಅನುಭವಗಳಿಗೆ ಅಪಾರ ಪ್ರಾಮುಖ್ಯತೆ ಪಡೆಯುತ್ತಿವೆ.

ಡಿಜಿಟಲ್ ನೇಟಿವ್ ಗಳು ಮುಖ್ಯವಾಗಿ ತಂತ್ರಜ್ಞಾನ ಕುರಿತು ತಿಳಿವಳಿಕೆ ಹೊಂದಿರುವ ಬಳಕೆದಾರರು ಆನ್ ಲೈನ್ ನಲ್ಲಿ 20 ಗಂಟೆಗಳಷ್ಟು ಕಂಟೆಂಟ್ ಬಳಕೆಯಲ್ಲಿ ಕಳೆಯುತ್ತಿದ್ದು ಅದರಲ್ಲಿ ಕಳೆದ ಮೂರು ವರ್ಷಗಳಲ್ಲಿ ಪ್ರೀಮಿಯಂ ಸ್ಪೇಷಿಯಲ್ ಆಡಿಯೊ ನಿರೀಕ್ಷಿಸುವವರಲ್ಲಿ ಎರಡಂಕಿ ಅಂದರೆ ಶೇ.11ರಷ್ಟು ಪ್ರಗತಿಯಾಗಿದೆ. ಈ ಸಂಶೋಧನೆಯು ಡಾಲ್ಬಿ ನಿಯೋಜಿಸಿದ “ಸ್ಮಾರ್ಟ್ ಫೋನ್ ಬಳಕೆದಾರರಲ್ಲಿ ಧ್ವನಿಯ ಪ್ರಾಮುಖ್ಯತೆ”ಯ ಮೂರನೇ ವಿಸ್ತಾರ ವಾರ್ಷಿಕ ಅಧ್ಯಯನದ ಫಲಿತಾಂಶ ನೀಡಿರುವ ಒಳನೋಟಗಳಾಗಿವೆ.

ಅಧ್ಯಯನದಲ್ಲಿ ಗುರುತಿಸಲಾದಂತೆ ಧ್ವನಿಯ ಗುಣಮಟ್ಟ ಗ್ರಾಹಕರ ಸ್ಮಾರ್ಟ್ಫೋನ್ ಖರೀದಿಗಳಿಗೆ ಪ್ರಭಾವಿಸುತ್ತಿರುವ ಅತ್ಯಂತ ಪ್ರಮುಖ ಪ್ರೇರಕಶಕ್ತಿಯಾಗಿದ್ದು(100ರಲ್ಲಿ 71 ಅಂಕ) ಬ್ಯಾಟರಿ(100ರಲ್ಲಿ 67 ಅಂಕ) ಮತ್ತು ಕ್ಯಾಮರಾ(100ರಲ್ಲಿ 61 ಅಂಕ) ನಂತರದ ಸ್ಥಾನದಲ್ಲಿವೆ. 2020ರಲ್ಲಿ ಪ್ರಾರಂಭದ ಸಿಎಂಆರ್ ಸಮೀಕ್ಷೆಯ ಸಮಯದಿಂದಲೂ ಧ್ವನಿಯೇ ಗ್ರಾಹಕರಿಗೆ ಖರೀದಿಯ ಪ್ರಮುಖ ಪ್ರೇರಕಶಕ್ತಿ ಎಂದು ಸಾಬೀತಾಗುತ್ತಿದೆ. 2020 ಮತ್ತು 2022ರ ನಡುವೆ ಧ್ವನಿಯ ಗುಣಮಟ್ಟದ ಪ್ರಾಮುಖ್ಯತೆಯ ಅಂಕವು ಶೇ.8ರಷ್ಟು ಹೆಚ್ಚಾಗಿದೆ.

ಸಿಎಂಆರ್ ನ ಇಂಡಸ್ಟ್ರಿ ಇಂಟೆಲಿಜೆನ್ಸ್ ಗ್ರೂಪ್ ಮುಖ್ಯಸ್ಥ ಪ್ರಭು ರಾಮ್, “ಸಂಗೀತ, ಚಲನಚಿತ್ರಗಳು, ಲೈವ್ ಕ್ರೀಡೆ ಮತ್ತು ಮೊಬೈಲ್ ಗೇಮಿಂಗ್ ನಲ್ಲಿ ಬರೀ ಸ್ಮಾರ್ಟ್ ಫೋನ್ ಗಳಲ್ಲಿ ಮಾತ್ರವಲ್ಲದೆ ಚಲನೆಯಲ್ಲಿ ಬಳಸುವ ಸಾಧನಗಳಲ್ಲೂ ಪ್ರೀಮಿಯಂ ಧ್ವನಿ ಅನುಭವಗಳಿಗೆ ಪ್ರಾಮುಖ್ಯತೆ ದೊರೆಯುತ್ತಿವೆ ಎಂದು ಹಲವು ಪ್ರಕರಣಗಳು ಸಾಬೀತುಪಡಿಸಿವೆ. ಸ್ಪೇಷಿಯಲ್ ಆಡಿಯೊಗೆ ಹೆಚ್ಚಿದ ಬೇಡಿಕೆಯಿಂದ ಗ್ರಾಹಕರು ಈಗ ಹೆಚ್ಚಾಗಿ ಅವರ ಕಂಟೆಂಟ್ ಅನುಭವಗಳಲ್ಲಿ ಆಳ ಮತ್ತು ವಿವರಗಳನ್ನು ನಿರೀಕ್ಷಿಸು ತ್ತಾರೆ. ಇದು ಡಾಲ್ಬಿ ಅಟ್ಮೊಸ್ ಮತ್ತು ಡಾಲ್ಬಿ ವಿಷನ್ ನಂತಹ ಉದ್ಯಮದ ಮುಂಚೂಣಿಯ ಆವಿಷ್ಕಾರಗಳಿಂದ ಸಾಧ್ಯವಾಗಿದೆ” ಎಂದರು.

ಅಧ್ಯಯನದ ಪ್ರಮುಖಾಂಶಗಳು ಇಲ್ಲಿವೆ:
• ಉನ್ನತೀಕರಿಸಿದ ಧ್ವನಿಯ ಗುಣಮಟ್ಟವು ಚಲನೆಯಲ್ಲಿ ಬಳಸುವ ಡಿವೈಸ್‌ಗಳಲ್ಲಿ ಅತ್ಯಂತ ಪ್ರಮುಖ, ಅತ್ಯಂತ ಅಗತ್ಯವಾದ ವಿಶೇಷತೆ
• ಚಲನೆಯಲ್ಲಿ ಬಳಸುವ ಡಿವೈಸ್‌ಗಳಲ್ಲಿ ಧ್ವನಿಯ ಗುಣಮಟ್ಟ ಅತ್ಯಂತ ಪ್ರಮುಖ ಖರೀದಿಯ ಚಾಲಕಶಕ್ತಿ.
• ಸಂಗೀತ ಆಲಿಸುವುದು, ಚಲನಚಿತ್ರಗಳ ವೀಕ್ಷಣೆ ಮತ್ತು ಒಟಿಟಿ ವೀಕ್ಷಣೆಯು ಗ್ರಾಹಕರು ತಮ್ಮ ಆಡಿಯೊ/ವಿಡಿಯೊಗಳನ್ನು ಸ್ಮಾರ್ಟ್ಫೋನ್‌ಗಳಲ್ಲಿ ಬಳಸುವ ಪ್ರಮುಖ ಮೂರು ಆದ್ಯತೆಗಳಾಗಿವೆ. ಆಸಕ್ತಿದಾಯಕ ಅಂಶವೆಂದರೆ ಈ ಅಧ್ಯಯನವು ಧ್ವನಿ ಕರೆಗಳಿಗೆ ವಾಟ್ಸಾಪ್‌ ನಲ್ಲಿ ಶೇ.41ರಷ್ಟು ಪ್ರಗತಿ ತೋರಿಸಿದ್ದು 2020ರಲ್ಲಿ ಕೇವಲ ಶೇ.38ರಷ್ಟಿದ್ದು 2022ರಲ್ಲಿ ಶೇ.79ರಷ್ಟಿದೆ.
• ಸ್ಮಾರ್ಟ್ ಫೋನ್ ಬಳಕೆದಾರರಲ್ಲಿ ಆಡಿಯೊ ಬುಕ್‌ಗಳ ಆಲಿಸುವಿಕೆಯಲ್ಲಿ ಗಮನಾರ್ಹ ಹೆಚ್ಚಳವಾಗಿದ್ದು ಅದು ಹೆಚ್ಚಾಗಿ 25ರಿಂದ 30 ವರ್ಷಗಳ ಬಳಕೆದಾರರಿಂದ ಪ್ರೇರಿತವಾಗಿದೆ.
• ಧ್ವನಿ ಅಥವಾ ದೃಶ್ಯದ ಕಂಟೆಂಟ್ ಬಳಕೆಯಲ್ಲಿ ವೈರ್‌ಲೆಸ್ ಹೆಡ್‌ಫೋನ್‌ ಗಳು ಅತ್ಯಂತ ಆದ್ಯತೆಯ ಸ್ಮಾರ್ಟ್ ಫೋನ್ ಅಕ್ಸೆಸರಿಗಳಾಗಿ ಮುಂದುವರಿದಿವೆ. ಸ್ಮಾರ್ಟ್ಫೋನ್ ಅಕ್ಸೆಸರಿಗಳ ಬಳಕೆ 2021ರಲ್ಲಿ ಹೆಚ್ಚಾಗಿದ್ದು ಅದಕ್ಕೆ ಈ ವರ್ಷ ಹೆಚ್ಚು ವಾಯ್ಸ್ ಕ್ಲಾರಿಟಿ(ಶೇ.64)ಗೆ ಗ್ರಾಹಕರು ವಾಲಿರುವುದು ಕಾರಣ.

ಕಂಟೆಂಟ್ ಕ್ರಿಯೇಟರ್‌ಗಳ ಹೆಚ್ಚಳ
• ಕಳೆದ ಮೂರು ವರ್ಷಗಳಿಂದ ವಿಡಿಯೋಗಳು ಮತ್ತು ಆಡಿಯೊ ಕಂಟೆಂಟ್ ಸೃಷ್ಟಿಯ ಅವಧಿ ಶೇ.10ರಷ್ಟು ಹೆಚ್ಚಾಗಿದೆ. ಸ್ಮಾರ್‍ ಬಳಕೆದಾರರು ಸರಾಸರಿ ವಾರಕ್ಕೆ 4ರಿಂದ 5 ಗಂಟೆಗಳು ಕಂಟೆಂಟ್ ಸೃಷ್ಟಿಯಲ್ಲಿ ಕಳೆಯುತ್ತಿದ್ದಾರೆ.
• ಪ್ರತಿ ಐದರಲ್ಲಿ ನಾಲ್ಕು ಸ್ಮಾರ್ಟ್ ಫೋನ್ ಬಳಕೆದಾರರು ಡಾಲ್ಬಿ ವಿಷನ್ ಸನ್ನದ್ಧ ಸ್ಮಾರ್ಟ್ ಫೋನ್ ಗಳಿಂದ ಹೆಚ್ಚು ವಿಡಿಯೋಗಳ ಚಿತ್ರೀಕರಣದಲ್ಲಿ ಆಸಕ್ತಿ ತೋರಿಸಿದ್ದಾರೆ

ಡಾಲ್ಬಿ ಅಟ್ಮೊಸ್ ಮತ್ತು ಡಾಲ್ಬಿ ವಿಷನ್ ಗ್ರಾಹಕರ ಸಕ್ರಿಯತೆ ಮುನ್ನಡೆಸುತ್ತಿದೆ
• ಪ್ರತಿ ಆರು ಬಳಕೆದಾರರಲ್ಲಿ ಐದು(ಶೇ.84)ಮಂದಿ ಅವರು ಡಾಲ್ಬಿ ಅಟ್ಮೊಸ್‌ನಲ್ಲಿ ಕಂಟೆಂಟ್ ಬಳಸಿದಾಗ ಉತ್ತಮ ರೀತಿಯಲ್ಲಿ ಕಂಟೆಂಟ್‌ಗೆ ಸಂಪರ್ಕ ಹೊಂದಿರುವಂತೆ ಭಾವಿಸುವುದಾಗಿ ಹೇಳಿದ್ದಾರೆ. ಇದು 2021ರಲ್ಲಿ ಶೇ.5ರಷ್ಟು ಹೆಚ್ಚಾಗಿದ್ದು ಅದಕ್ಕೆ ಡಾಲ್ಬಿ ಅಟ್ಮೊಸ್‌ಲ್ಲಿ ದೊರೆಯುವ ಹಲವು ಆಯಾಮಗಳ ಶಬ್ದದ ಅನುಭವ ಕಾರಣ.
• ಪ್ರತಿ ಆರು ಬಳಕೆದಾರರಲ್ಲಿ ಐದು(ಶೇ.84) ಮಂದಿ ಡಾಲ್ಬಿ ಅಟ್ಮೊಸ್/ಡಾಲ್ಬಿ ವಿಷನ್ ಕಳೆದ ಮೂರು ವರ್ಷಗಳಲ್ಲಿ ಅವರ ಮೊಬೈಲ್ ಕಂಟೆಂಟ್ ಬಳಕೆ ಹೆಚ್ಚಿಸಲು ಕೊಡುಗೆ ನೀಡಿದೆ ಎಂದು ಭಾವಿಸಿದ್ದಾರೆ.
• ಚಲನಚಿತ್ರಗಳು, ಸಂಗೀತ ಮತ್ತು ಎಪಿಸೋಡುಗಳ ಕಂಟೆAಟ್ ಒಳಗೊಂಡು ಗ್ರಾಹಕರು ಮುಂಚೂಣಿಯ ಮೂರು ಕಂಟೆAಟ್ ಅನ್ನು ಡಾಲ್ಬಿ ಅಟ್ಮೊಸ್ ಡಾಲ್ಬಿ ವಿಷನ್‌ನಲ್ಲಿ ಅನುಭವ ಪಡೆಯಲು ಬಯಸುತ್ತಾರೆ. ವಾಸ್ತವವಾಗಿ ಕಳೆದ ಮೂರು ವರ್ಷಗಳಲ್ಲಿ ನಡೆಸಿದ ಅಧ್ಯಯನದ ಒಳನೋಟಗಳ ಪ್ರಕಾರ ಚಲನಚಿತ್ರಗಳು ಭಾರತೀಯರಲ್ಲಿ ಹೆಚ್ಚು ಅನುರಣಿಸುತ್ತವೆ.
• ಎಂಟರಲ್ಲಿ ಏಳು ಮಂದಿ ಬಳಕೆದಾರರು ಡಾಲ್ಬಿ ಅಟ್ಮೊಸ್/ಡಾಲ್ಬಿ ವಿಷನ್ ಅವರ ಕಂಟೆಂಟ್ ಚಂದಾದಾರಿಕೆ ಪ್ಲಾನ್‌ಗಳಿಗೆ ಕೊಡುಗೆ ನೀಡುತ್ತದೆ ಎಂದು ನಂಬಿದ್ದಾರೆ.

ಸಂಪಾದಕರಿಗೆ ಟಿಪ್ಪಣಿ:
ಸೈಬರ್ ಮೀಡಿಯಾ ರೀಸರ್ಚ್(ಸಿಎಂಆರ್) ಮುಂಚೂಣಿಯ ತಂತ್ರಜ್ಞಾನ ಸಂಶೋಧನೆ ಮತ್ತು ಕನ್ಸಲ್ಟಿಂಗ್ ಕಂಪನಿಯಾಗಿದ್ದು “ಆಡಿಯೊ ಅಂಡ್ ವಿಡಿಯೊ ಕನ್ಸಂಪ್ಷನ್ ಆನ್ ‘ಆನ್ ದಿ ಗೊ ಡಿವೈಸಸ್’ ಇಂಡಿಯಾ’ ಎಂಬ ಶೀರ್ಷಿಕೆಯಡಿ ಸಮೀಕ್ಷೆಯ ತೃತೀಯ ಆವೃತ್ತಿ ಅನಾವರಣಗೊಳಿಸಿದೆ. ಈ ಅಧ್ಯಯನವು 18ರಿಂದ 40 ವರ್ಷಗಳ ವಯೋಮಾನದ ಎ ಮತ್ತು ಬಿ ವರ್ಗಗಳ 2,344 ಗ್ರಾಹಕರ ವ್ಯಾಪ್ತಿ ಹೊಂದಿದೆ.
ಈ ಅಧ್ಯಯನವನ್ನು ಟೈಯರ್ 1 ಮತ್ತು ಟೈಯರ್ 2 ನಗರಗಳಾದ ದೆಹಲಿ, ಮುಂಬೈ, ಕೊಲ್ಕತಾ, ಬೆಂಗಳೂರು, ಮದುರೈ, ರಾಜ್‌ಕೋಟ್, ಭುವನೇಶ್ವರ ಮತ್ತು ಜಲಂಧರ್ ಒಳಗೊಂಡು ಭಾರತದ ಎಂಟು ನಗರಗಳಲ್ಲಿ ನಡೆಸಲಾಗಿದೆ.
ಈ ಗಾತ್ರದ ಯಾದೃಚ್ಛಿಕ ಸಮೀಕ್ಷೆಯ ಫಲಿತಾಂಶಗಳಲ್ಲಿ ಇಡೀ ಜನಸಂಖ್ಯೆಯನ್ನು ಸಮೀಕ್ಷಿಸಿದಾಗ ಶೇ.3ರಷ್ಟು ಹೆಚ್ಚು ಅಥವಾ ಕಡಿಮೆ ಇರಬಹುದಾಗಿದ್ದು ಶೇ.95ರಷ್ಟು ಅಂಕಿಅಂಶ ನಿಖರತೆ ಹೊಂದಿದೆ.