Wednesday, 11th December 2024

200 ಕ್ಷೇತ್ರಗಳನ್ನು ಡಿಎಂಕೆ ಗೆಲ್ಲಲಿದೆ: ಎಂ.ಕೆ.ಸ್ಟ್ಯಾಲಿನ್

ಕಾಂಚಿಪುರಂ : ಎಐಎಡಿಎಂಕೆ ಒಂದು ಕ್ಷೇತ್ರದಲ್ಲಿ ವಿಜಯಶಾಲಿಯಾದರೂ ಅದು ಬಿಜೆಪಿ ಶಾಸಕನ ಜಯವಾಗಲಿದೆ. ಏಪ್ರಿಲ್ 6 ರಂದು ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಮತ ಚಲಾವಣೆ ಮಾಡಬೇಕು ಎಂದು ಡಿಎಂಕೆ ಅಧ್ಯಕ್ಷ ಎಂ.ಕೆಸ್ಟ್ಯಾಲಿನ್ ಹೇಳಿದ್ದಾರೆ.

ಕಾಂಚಿಪುರಂ ಸಮೀಪದ ಉತಿರಾಮೆರೂರ್ ಎಂಬಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸ್ಟ್ಯಾಲಿನ್, ತಮಿಳುನಾಡಿನ 234 ವಿಧಾನ ಸಭಾ ಕ್ಷೇತ್ರದಲ್ಲಿ 200 ಕ್ಷೇತ್ರಗಳನ್ನು ಡಿಎಂಕೆ ಗೆಲ್ಲಲಿದೆ ಎಂದಿದ್ದಾರೆ.

ಉಪ ಮುಖ್ಯಮಂತ್ರಿ ಒ ಪನ್ನೀರ್‌ ಸೆಲ್ವಂ ಅವರ ಪುತ್ರ ಥೇನಿಯ ಏಕೈಕ ಎಐಎಡಿಎಂಕೆ ಲೋಕಸಭಾ ಸಂಸತ್ ಸದಸ್ಯ ಪಿ.ರವೀಂದ್ರನಾಥ್ ಅವರು ‘ಬಿಜೆಪಿ ಸಂಸದರಾಗಿ’ ಮಾತ್ರ ಕಾರ್ಯನಿರ್ವಹಿಸಿದ್ದಾರೆ. ನಾವು ಬಿಜೆಪಿಯನ್ನು, ಎಐಎಡಿಎಂಕೆ ಯನ್ನು ಕೂಡ ಗೆಲ್ಲುವುದಕ್ಕೆ ಬಿಡಬಾರದು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದು ಸ್ಟ್ಯಾಲಿನ್ ಜನರಿಗೆ ಕಿವಿಮಾತು ಹೇಳಿದ್ದಾರೆ.

ಎ ಐ ಎ ಡಿ ಎಮ್ ಕೆ ಬಿಜೆಪಿಯ ಒಂದು ಶಾಖೆ ಎಂದು ಸ್ಟಾಲಿನ್ ಹೇಳಿದ್ದಾರೆ. ಮುಖ್ಯಮಂತ್ರಿ ಕೆ. ಪಳನಿ ಸ್ವಾಮಿ ಸ್ಟ್ಯಾಲಿನ್ ಹೇಳಿಕೆಯನ್ನು ಇದೊಂದು ಸುಳ್ಳು ಆರೋಪ ಎಂದು ನಿರಾಕರಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily