Friday, 13th December 2024

‘ಡಾಲರ್ ಶೇಷಾದ್ರಿ’ ಹಿರಿಯ ಅರ್ಚಕ ಪಿ.ಶೇಷಾದ್ರಿ ಇನ್ನಿಲ್ಲ

ತಿರುಪತಿ: ‘ಡಾಲರ್ ಶೇಷಾದ್ರಿ’ ಎಂದೇ ಖ್ಯಾತ ವೆಂಕಟೇಶ್ವರ ದೇವಸ್ಥಾನದ ಹಿರಿಯ ಅರ್ಚಕ ಪಿ ಶೇಷಾದ್ರಿ ಸೋಮವಾರ  ವಿಧಿವಶ ರಾಗಿದ್ದಾರೆ.

ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ವಿಶೇಷ ಕರ್ತವ್ಯ ಅಧಿಕಾರಿಯಾಗಿ (ಒಎಸ್‌ಡಿ) ಸೇವೆ ಸಲ್ಲಿಸುತ್ತಿದ್ದ ಶೇಷಾದ್ರಿ (75) ಅವರು ಕಾರ್ತಿಕ ದೀಪೋತ್ಸವದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಭಾನುವಾರ ವಿಶಾಖಪಟ್ಟಣಕ್ಕೆ ಆಗಮಿಸಿದ್ದರು.

ಶೇಷಾದ್ರಿ ಅವರಿಗೆ ಭಾನುವಾರ ರಾತ್ರಿ ತೀವ್ರ ಹೃದಯಾಘಾತವಾಗಿದ್ದು, ಸೋಮ ವಾರ ಕೊನೆಯುಸಿರೆಳೆದಿದ್ದಾರೆ. ಜುಲೈ 31, 2006 ರಂದು ಪಾಲಾ ಶೇಷಾದ್ರಿ ಅವರು ನಿವೃತ್ತಿ ಹೊಂದಿದ್ದರು.

ಆಗಮ ಶಾಸ್ತ್ರ ಪಂಡಿತರಾಗಿದ್ದ ಡಾಲರ್ ಶೇಷಾದ್ರಿ ಅವರು ಕಳೆದ 50 ವರ್ಷಗಳಿಂದ ತಿರುಮಲ ವೆಂಕಟೇಶ್ವರ ದೇವರ ಸೇವೆ ಸಲ್ಲಿಸುತ್ತಿದ್ದರು.