Saturday, 14th December 2024

ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ

ನವದೆಹಲಿ : ದ್ರೌಪದಿ ಮುರ್ಮು 15ನೇ ಅಧ್ಯಕ್ಷೀಯ ಚುನಾವಣೆ ಯಲ್ಲಿ ವಿಜೇತರಾಗಿದ್ದಾರೆ. ಮುರ್ಮು ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಶೇ.64ರಷ್ಟು ಮತಗಳನ್ನ ಪಡೆದರೆ, ಯಶವಂತ್ ಸಿನ್ಹಾ ಶೇ.36ರಷ್ಟು ಮತಗಳನ್ನ ಪಡೆದಿದ್ದಾರೆ.

ಮಾನ್ಯ ಮತಗಳ ಒಟ್ಟು ಸಂಖ್ಯೆ 3219 ಆಗಿದ್ದು, ಒಟ್ಟು ಮೌಲ್ಯ 8,38,839 ಆಗಿದೆ. ಈ ಪೈಕಿ ಮುರ್ಮು 5,77,777 ಮೌಲ್ಯದ 2161 ಮತಗಳನ್ನ ಪಡೆದಿದ್ದರು. ಯಶವಂತ್ ಸಿನ್ಹಾ ಅವರು 2,61,062 ಮೌಲ್ಯದ 1058 ಮತಗಳನ್ನು ಪಡೆದಿದ್ದಾರೆ ಎಂದು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿಸಿ ಮೋದಿ ಮಾಹಿತಿ ನೀಡಿದ್ದಾರೆ.

ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ಮುರ್ಮು ಅವರಿಗೆ ಗಣ್ಯಾತಿಗಣ್ಯರಿಂದ ಶುಭಾಷಯಗಳ ಮಹಾಪೂರವೇ ಹರಿದು ಬರ್ತಿದ್ದು, ಪ್ರಧಾನಿ ಮೋದಿ ಕೂಡ ಖುದ್ದು ಭೇಟಿಯಾಗಿ ಶುಭಾಷಯ ತಿಳಿಸಿದ್ದಾರೆ.

ನೂತನ ರಾಷ್ಟ್ರಪತಿ ಅವರನ್ನ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ, ‘ಶ್ರೀಮತಿ ದ್ರೌಪದಿ ಮುರ್ಮು ಅವರು ಭಾರತೀಯ ಸಮಾಜಕ್ಕೆ, ವಿಶೇಷವಾಗಿ ಬಡವರು ಮತ್ತು ಅಂಚಿನಲ್ಲಿರುವವರಿಗೆ ಭರವಸೆಯ ಸಂಕೇತವಾಗಿದ್ದಾರೆ’ ಎಂದು ಹೇಳಿದರು.