Thursday, 3rd October 2024

ಅಮಲಿನಲ್ಲಿ ಗುರುದ್ವಾರ ಪ್ರವೇಶ: ಮಾನ್ ವಿರುದ್ಧ ದೂರು ದಾಖಲು

Bhagawant mann

ಚಂಡೀಗಢ : ಕುಡಿದ ಅಮಲಿನಲ್ಲಿ ಗುರುದ್ವಾರಕ್ಕೆ ಪ್ರವೇಶಿಸಿದ ಆರೋಪದ ಮೇಲೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಬಿಜೆಪಿ ನಾಯಕ ಬಗ್ಗಾ ಶನಿವಾರ ಪೊಲೀಸ್ ದೂರು ದಾಖಲಿಸಿದ್ದಾರೆ

ದೂರಿನ ಸ್ಕ್ರೀನ್ಶಾಟ್ ಅನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಬಿಜೆಪಿ ನಾಯಕ, ‘ಕುಡಿದ ಸ್ಥಿತಿಯಲ್ಲಿ ಗುರುದ್ವಾರ ದಮ್ದಮಾ ಸಾಹಿಬ್ ಪ್ರವೇಶಿಸಿದ್ದಕ್ಕಾಗಿ ಪಂಜಾಬ್ ಸಿಎಂ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ. ನನ್ನ ದೂರಿನ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇನೆ.

ಇದಕ್ಕಾಗಿ ಪಂಜಾಬ್ ಮುಖ್ಯಮಂತ್ರಿಗಳು ಕ್ಷಮೆಯಾಚಿಸಬೇಕು ಎಂದು ಸಮಿತಿಯು ಒತ್ತಾಯಿಸಿತ್ತು.