ನವದೆಹಲಿ: ಫಿಲಿಪೈನ್ಸ್‌ನ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಗೆ ಸಂಬಂಧಿಸಿದ ಕೃಷಿ ವಿಜ್ಞಾನಿ ಡಾ. ಸ್ವಾತಿ ನಾಯಕ್ ಅವರನ್ನು ಬೋರ್ಲಾಗ್ ಫೀಲ್ಡ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಅಕ್ಟೋಬರ್ 24 ರಂದು ಅಮೆರಿಕದಲ್ಲಿ ನೀಡಲಾಗುವುದು.
ಡಾ.ಸ್ವಾತಿ ನಾಯಕ್ ಮೂಲತಃ ಒಡಿಶಾದವರು. 2003-07 ರ ನಡುವೆ ಆಚಾರ್ಯ ಎನ್‌ಜಿ ರಂಗ ಕೃಷಿ ವಿಶ್ವವಿದ್ಯಾ ಲಯದಿಂದ ಕೃಷಿ ವಿಜ್ಞಾನದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಆನಂದ್‌ನ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟ್‌ನಲ್ಲಿ ಗ್ರಾಮೀಣ ನಿರ್ವಹಣೆಯಲ್ಲಿ ಸ್ನಾತಕೋ ತ್ತರ ಪದವಿ ಪಡೆದಿದ್ದಾರೆ.
ಅವರು ಅಮಿಟಿ ವಿಶ್ವವಿದ್ಯಾಲಯದಿಂದ ಕೃಷಿ ವಿಸ್ತರಣಾ ನಿರ್ವಹಣಾ ಕಾರ್ಯತಂತ್ರದಲ್ಲಿ ಪಿಹೆಚ್‌ಡಿ ಕೂಡ ಮಾಡಿದ್ದಾರೆ. ಪ್ರಸ್ತುತ ಅವರು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಬೀಜ ವ್ಯವಸ್ಥೆಗಳು ಮತ್ತು ಉತ್ಪಾದನಾ ನಿರ್ವಹಣೆಯ ದಕ್ಷಿಣ ಏಷ್ಯಾದ ಮುಖ್ಯಸ್ಥರಾಗಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಅವರ ಅತ್ಯುತ್ತಮ ಕೆಲಸ ವನ್ನು ಗುರುತಿಸಿ ‘ಸೀಡ್ ಲೇಡಿ’ ಎಂದೂ ಕರೆಯಲಾಗುತ್ತದೆ.
10 ವರ್ಷಗಳಿಂದ ನಾನು ಫಿಲಿಪೈನ್ಸ್‌ನ ರೈಸ್ ರಿಸರ್ಚ್ ಸೆಂಟರ್‌ನೊಂದಿಗೆ ಸಂಬಂಧ ಹೊಂದಿದ್ದೇನೆ. ಇದಲ್ಲದೇ, ವಾರಾಣಸಿಯಲ್ಲಿರುವ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರದೊಂದಿಗೆ ಸಹ ನಿಕಟ ಸಂಪರ್ಕವಿದೆ. ನಮ್ಮಲ್ಲಿ ಕೃಷಿ ಕ್ಷೇತ್ರದಲ್ಲಿ ಭಾಗವಹಿಸುವ ಮಹಿಳೆಯರ ಪ್ರಾತಿನಿಧ್ಯ ತೀರಾ ಕಡಿಮೆ. ಈ ಪ್ರಶಸ್ತಿಯ ಮೂಲಕ ಇಡೀ ಮಹಿಳಾ ಸಮುದಾಯವನ್ನು ಪ್ರತಿನಿಧಿಸುತ್ತಿರುವುದು ನನ್ನ ಅದೃಷ್ಟ. ಹವಾಮಾನ ಸ್ಥಿತಿಸ್ಥಾಪಕ ಭತ್ತದ ಬೀಜದ ತಳಿಗಳು, ಅಲ್ಪಾವಧಿಯ ಭತ್ತದ ತಳಿಗಳು ಮತ್ತು ವಿವಿಧ ಬೆಳೆಗಳಿಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದೇನೆ ಎಂದರು.