Friday, 13th December 2024

Drug Bust: ಬೃಹತ್‌ ಮಾದಕ ವಸ್ತು ಜಾಲ ಬಯಲು; 2,000 ಕೋಟಿ ರೂ. ಮೌಲ್ಯದ ಕೊಕೇನ್‌ ಸೀಜ್‌

Drug burst

ನವದೆಹಲಿ: ಭಾರೀ ಮಾದಕ ವಸ್ತು ಜಾಲ(Drug Bust)ವನ್ನು ದೆಹಲಿ ಪೊಲೀಸರು ಬೇಧಿಸಿದ್ದು, ಬರೋಬ್ಬರಿ 2,000 ಕೋಟಿ ರೂ. 500ಕೆ.ಜಿ ಕೊಕೇನ್‌ ಸೀಜ್‌(Drug Seize) ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ದಕ್ಷಿಣ ದೆಹಲಿಯಲ್ಲಿ ಪೊಲೀಸರು ರೇಡ್‌ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅರೆಸ್ಟ್‌ ಮಾಡಲಾಗಿದೆ.

ಇನ್ನು ಈ ಬೃಹತ್‌ ಮಾದಕ ವಸ್ತು ಜಾಲದ ಹಿಂದೆ ಅಂತಾರಾಷ್ಟ್ರೀಯ ಡ್ರಗ್ಸ್ ಸಿಂಡಿಕೇಟ್‌ ಇರುವಂತೆ ಮೇಲ್ನೋಟಕ್ಕೆ ಕಂಡು ಬಂದಿದೆ. ಇನ್ನು ಪ್ರಕರಣದಲ್ಲಿ ಇಬ್ಬರು ಆಫ್ಘನ್‌ ಪ್ರಜೆಗಳನ್ನು ಅರೆಸ್ಟ್‌ ಮಾಡಲಾಗಿದೆ. ಇವರ ಬಳಿ 400 ಗ್ರಾಂ ಹೆರಾಯಿನ್‌ ಮತ್ತು 160 ಗ್ರಾಂ ಕೊಕೇನ್‌ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರೆದಿದೆ.

ದೆಹಲಿಯ ಓಲ್ಡ್‌ ಕೊತ್ವಾಲಿ ಪ್ರದೇಶದಲ್ಲೂ ಮಾದಕ ವಸ್ತು ಜಾಲದ ಮೇಲೆ ಪೊಲೀಸರು ರೇಡ್‌ ಮಾಡಿದ್ದಾರೆ. ಮಾದಕ ವಸ್ತು ನಿಗ್ರಹ ದಳದ ಇನ್‌ಸ್ಪೆಕ್ಟರ್‌ ರಾಕೇಶ್ ದುಹಾನ್, ಆಕ್ಸ್ಫಾ ಅನಿಲ್ ಶರ್ಮಾ ಮತ್ತು ನರೇಶ್ ಕುಮಾರ್ ಮತ್ತು ಡಿಸಿಪಿ ಅಮಿತ್‌ ಗೋಲಿಪ್ಸ್‌ ಇದ್ದ ತಂಡ ದಾಳಿ ನಡೆಸಿದೆ. 1.25 ಕೋಟಿ ರೂ. ಮೌಲ್ಯದ ಹೆರಾಯಿನ್‌ ವಶಕ್ಕೆ ಪಡೆದಿದ್ದಾರೆ.

ಕೆಲವು ತಿಂಗಳ ಹಿಂದೆ ಗುಜರಾತ್​ ಕರಾವಳಿಯಲ್ಲಿ ಬರೋಬ್ಬರಿ ₹602 ಕೋಟಿ ಮೌಲ್ಯದ ಮಾದಕ ವಸ್ತುಗಳು ಪತ್ತೆಯಾಗಿದ್ದು, 14 ಮಂದಿ ಪಾಕಿಸ್ತಾನದ ಪ್ರಜೆಗಳನ್ನು ಬಂಧಿಸಲಾಗಿದೆ. ಭಯೋತ್ಪಾದನಾ ನಿಗ್ರಹ ದಳ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿತ್ತು.

ಕಾರ್ಯಾಚರಣೆಯ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಪಾಕಿಸ್ತಾನಿ ಪ್ರಜೆಗಳು, ಎಟಿಎಸ್ ಅಧಿಕಾರಿಗಳ ಮೇಲೆ ದೋಣಿ ಚಲಾಯಿಸಲು ಪ್ರಯತ್ನಿಸಿದರು. ಭದ್ರತಾ ಏಜೆನ್ಸಿಗಳು ಕಳೆದ ಎರಡು ದಿನಗಳಿಂದ ಅಂತರಾಷ್ಟ್ರೀಯ ಸಮುದ್ರ ಗಡಿಯ ಬಳಿ ಅಂದರೆ ಭಾರತದ ಪ್ರಾದೇಶಿಕ ಜಲ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದವು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:₹602 ಕೋಟಿ ಮೌಲ್ಯದ ಮಾದಕ ವಸ್ತು ಪತ್ತೆ: 14 ಪಾಕಿಸ್ತಾನ ಪ್ರಜೆಗಳ ಬಂಧನ