Saturday, 14th December 2024

ಡ್ರಗ್‌ ಪೆಡ್ಲರ್‌ ಹ್ಯಾರಿಸ್‌ ಖಾನ್‌ ಬಂಧನ

ಮುಂಬೈ: ಡ್ರಗ್‌ ಪೆಡ್ಲರ್‌ ಪರ್ವೇಜ್ ಖಾನ್ ಅಲಿಯಾಸ್ ಚಿಂಕು ಪಠಾಣ್‌ ನೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಡ್ರಗ್‌ ಪೆಡ್ಲರ್‌ ಹ್ಯಾರಿಸ್‌ ಖಾನ್‌ನನ್ನು ಮುಂಬೈನ ಮಾದಕವಸ್ತು ನಿಯಂತ್ರಣ ಬ್ಯೂರೊದ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ಬಾಲಿವುಡ್‌ನ ನಟ ಸುಶಾಂತ್‌ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್‌ ಪ್ರಕರಣದಲ್ಲಿ ಖಾನ್ ಪಾತ್ರವಿರುವ ಕುರಿತು ಎನ್‌ಸಿಬಿ ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ನೇತೃತ್ವದ ತಂಡ, ಮುಂಬೈನ ಅಂಧೇರಿ ಉಪನಗರ, ಲೋಖಂಡ್ವಾಲಾ ಮತ್ತು ಬಾಂದ್ರಾ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ, ಖಾನ್‌ನನ್ನು ಬಂಧಿಸಿದೆ.