Wednesday, 9th October 2024

ಒಂದು ಕೋಟಿ ಮೌಲ್ಯದ ಡ್ರಗ್ಸ್ ವಶ: 16 ನೈಜೀರಿಯನ್ ಪ್ರಜೆಗಳ ಬಂಧನ

ಥಾಣೆ: ಮಹಾರಾಷ್ಟ್ರದ ನವಿ ಮುಂಬೈ ನಗರದಲ್ಲಿ ರೋ ಹೌಸ್‍ನಲ್ಲಿ ಒಂದು ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 16 ನೈಜೀರಿಯನ್ ಪ್ರಜೆ ಗಳನ್ನು ಬಂಧಿಸಿದ್ದಾರೆ.

ಹೊಸ ವರ್ಷದ ಕಾರ್ಯಕ್ರಮಗಳಲ್ಲಿ ಪೂರೈಕೆಗಾಗಿ ಕೆಲವು ಆಫ್ರಿಕನ್ನರು ಮಾದಕ ದ್ರವ್ಯ ಗಳನ್ನು ಸಂಗ್ರಹಿಸುತ್ತಿದ್ದಾರೆ ಎಂಬ ಸುಳಿವಿನ ಮೇರೆಗೆ ನಿನ್ನೆ ಮನೆಯ ಮೇಲೆ ದಾಳಿ ನಡೆಸ ಲಾಯಿತು ಎಂದು ನವಿ ಮುಂಬೈ ಪೊಲೀಸ್ ಉಪ ಕಮಿಷನರ್ (ಅಪರಾಧ) ಅಮಿತ್ ಕಾಳೆ ತಿಳಿಸಿದ್ದಾರೆ.

ವಶಪಡಿಸಿಕೊಂಡ ಡ್ರಗ್ಸ್ 1,00,70,000 ರೂ ಮೌಲ್ಯದ ಗಾಂಜಾ, ಚರಸ್, ಹೆರಾಯಿನ್ ಮತ್ತು ಮೆಥಾಕ್ವಾಲೋನ್ ಸೇರಿವೆ. ಆರು ಮಹಿಳೆಯರು ಸೇರಿದಂತೆ 16 ನೈಜೀರಿಯನ್ನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಕ್ರೈಂ ಬ್ರಾಂಚ್ ಮತ್ತು ಆಯಂಟಿ ನಾರ್ಕೋಟಿಕ್ಸ್ ಸೆಲ್ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತನಿಖಾ ತಂಡವು ಈ ಪ್ರಕರಣದ ತನಿಖೆಯನ್ನು ನಡೆಸಲಿದ್ದು, ಅಕ್ರಮ ವಸ್ತು ಗಳನ್ನು ಎಲ್ಲಿಗೆ ಸರಬರಾಜು ಮಾಡಬೇಕಿತ್ತು ಎಂದು ಪತ್ತೆ ಹಚ್ಚಲಿದೆ ಎಂದು ತಿಳಿಸಿದ್ದಾರೆ.

 
Read E-Paper click here