Wednesday, 11th December 2024

ರಾಜಕೀಯಕ್ಕೆ ‘ಮೆಟ್ರೋಮ್ಯಾನ್’ ಇ ಶ್ರೀಧರನ್ ಗುಡ್ ಬೈ

e sreedharan

ಚೆನ್ನೈ: ‘ಮೆಟ್ರೋಮ್ಯಾನ್’ ಇ ಶ್ರೀಧರನ್ ಅವರು ಗುರುವಾರ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ.

ಈ ವರ್ಷದ ಏಪ್ರಿಲ್‌ನಲ್ಲಿ ಪಾಲಕ್ಕಾಡ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.

ಮಲಪ್ಪುರಂನಲ್ಲಿ ಮಾತನಾಡಿದ ಶ್ರೀಧರನ್, ಇನ್ನು ಮುಂದೆ ಸಕ್ರಿಯ ರಾಜಕಾರಣದಲ್ಲಿ ಇರುವುದಿಲ್ಲ. ವಿಧಾನಸಭಾ ಚುನಾವಣೆಯ ಸೋಲಿನಿಂದ ಪಾಠ ಕಲಿತಿದ್ದೇನೆ. ದೇಶ ಸೇವೆ ಮಾಡುತ್ತೇನೆ. ಆದರೆ ರಾಜಕೀಯದಲ್ಲಿ ಇರಲ್ಲ ಎಂದು ತಿಳಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಶ್ರೀಧರನ್ ಅವರು ಕಾಂಗ್ರೆಸ್ ಅಭ್ಯರ್ಥಿ ಶಫಿ ಪರಂಬಿಲ್ ವಿರುದ್ಧ 3,859 ಮತಗಳ ಅಂತರದಿಂದ ಸೋತಿದ್ದರು. ಶ್ರೀಧರನ್ ಅವರು ಕೇರಳ ವಿಧಾನಸಭೆ ಚುನಾವಣೆಗೂ ಒಂದು ತಿಂಗಳ ಮುನ್ನ ಬಿಜೆಪಿ ಸೇರಿದ್ದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಶ್ರೀಧರನ್ ಚುನಾ ವಣೆಗೂ ಮುನ್ನ ಹೇಳಿದ್ದರು.