Saturday, 23rd November 2024

Earthquake: ಕಣಿವೆ ರಾಜ್ಯದ ಹಲವೆಡೆ 5.2 ತೀವ್ರತೆಯ ಪ್ರಬಲ ಭೂಕಂಪ

earthquake

ಶ್ರೀನಗರ: ಜಮ್ಮು-ಕಾಶ್ಮೀರ(Jammu-Kashmir) ಕಣಿವೆಯಲ್ಲಿ ಬುಧವಾರ ಭೂಕಂಪ ಸಂಭವಿಸಿದ್ದು(Earthquake), ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದೆ. ಯಾವುದೇ ಆಸ್ತಿಪಾಸ್ತಿಗೆ ಯಾವುದೇ ಹಾನಿ ಅಥವಾ ಹಾನಿ ಸಂಭವಿಸಿದ ಬಗ್ಗೆ ಇದುವರೆಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

MET ಇಲಾಖೆಯ ಅಧಿಕಾರಿಗಳ ಪ್ರಕಾರ, ಇಂದು ಬೆಳಿಗ್ಗೆ 10.43 ರ ಸುಮಾರಿಗೆ ಕಾಶ್ಮೀರ ಕಣಿವೆಯಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಅದರ ಕೇಂದ್ರಬಿಂದು ಅಫ್ಘಾನಿಸ್ತಾನ ಪ್ರದೇಶದಲ್ಲಿರಬಹುದು ಎಂದು ಅಂದಾಜಿಸಲಾಗಿದೆ. ಕಣಿವೆಯ ಹಲವೆಡೆ ಕಂಪನದ ಅನುಭವವಾಗಿದೆ. ಕೆಲವೆಡೆ ಜನರು ತಮ್ಮ ಮನೆ ಮತ್ತು ಕೆಲಸದ ಸ್ಥಳಗಳಿಂದ ಹೊರಕ್ಕೆ ಓಡಿ ಬಂದಿದ್ದಾರೆ.

ಇಂದು ಖೈಬರ್ ಪಖ್ತುಂಖ್ವಾದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ನೌಶೇರಾ, ಪೇಶಾವರ್, ಅಬೋಟಾಬಾದ್, ಮಲಕಂಡ್, ಕೊಹತ್, ಬುನೇರ್ ಮತ್ತು ಸ್ವಾತ್‌ನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪದ ಕೇಂದ್ರ ಬಿಂದು ಅಫ್ಘಾನಿಸ್ತಾನ-ತಜಕಿಸ್ತಾನ್ ಗಡಿಯ ಸಮೀಪವಿರುವ ಹಿಂದೂಕುಶ್ ಪ್ರದೇಶದಲ್ಲಿ 220 ಕಿ.ಮೀ ಆಳದಲ್ಲಿದೆ.

ಕೆಲವು ತಿಂಗಳ ಹಿಂದೆಯಷ್ಟೇ (ಆಗಸ್ಟ್‌ 20) ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ 4.9 ತೀವ್ರತೆಯ ಮಧ್ಯಮ ಭೂಕಂಪ ಸಂಭವಿಸಿತ್ತು. ಅದಕ್ಕೂ ಮೊದಲು ಈ ವರ್ಷದ ಜುಲೈನಲ್ಲಿ ಬಾರಾಮುಲ್ಲಾದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಮಧ್ಯಾಹ್ನ 12.26ಕ್ಕೆ 5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿತ್ತು. ಅಲ್ಲದೆ ಆಗಸ್ಟ್‌ ಆರಂಭದಲ್ಲಿ ಫರಿದಾಬಾದ್ ಜಿಲ್ಲೆಯನ್ನು ನಡುಗಿಸಿದ ಎರಡು ಭೂಕಂಪಗಳಿಂದ ಹರಿಯಾಣದ ನಿವಾಸಿಗಳು ಬೆಚ್ಚಿಬಿದ್ದಿದ್ದರು. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪ್ರಕಾರ, ಬೆಳಿಗ್ಗೆ 10:54ರ ಸುಮಾರಿಗೆ ಮೊದಲ ಭೂಕಂಪನದ ಅನುಭವವಾಗಿತ್ತು. ನಂತರ ಬೆಳಿಗ್ಗೆ 11:43ಕ್ಕೆ ಎರಡನೇ ಭೂಕಂಪ ಸಂಭವಿಸಿತ್ತು. ದೆಹಲಿ-ಎನ್‌ಸಿಅರ್‌ ಪ್ರದೇಶದಾದ್ಯಂತ ಹಲವು ಪ್ರದೇಶಗಳಲ್ಲಿ ಭೂಕಂಪವಾದ ವರದಿಯಾಗಿತ್ತು. ಆದರೆ ಯಾವುದೇ ಸಾವು ನೋವುಗಳು ವರದಿಯಾಗಿರಲಿಲ್ಲ.

ಇದಾದ ಬಳಿಕ ಉತ್ತರ ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಲವೆಡೆ ಸೆಪ್ಟೆಂಬರ್‌ 11ರಂದು ಭೂಕಂಪದ ಅನುಭವವಾಗಿತ್ತು. ಭಾರತದ ಹೊಸದಿಲ್ಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಪಾಕಿಸ್ತಾನದ ಪೇಶಾವರ, ಇಸ್ಲಾಮಾಬಾದ್ ಮತ್ತು ಲಾಹೋರ್ ಹಾಗೂ ಅಫ್ಘಾನಿಸ್ತಾನದಲ್ಲಿ ಭೂಕಂಪವಾಗಿತ್ತು. ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: JK Special Status: ಜಮ್ಮು-ಕಾಶ್ಮೀರ ಸದನದಲ್ಲಿ ಮೊಳಗಿದ ಜೈ ಶ್ರೀರಾಮ್‌ ಘೋಷಣೆ; ಭಾರೀ ಕೋಲಾಹಲ