Friday, 13th December 2024

ಜ-ಕಾಶ್ಮೀರದಲ್ಲಿ ಭೂಕಂಪ: 3.7 ತೀವ್ರತೆ ದಾಖಲು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 3.7 ತೀವ್ರತೆಯಷ್ಟು ಭೂಕಂಪ ಸಂಭವಿಸಿದೆ ಎನ್ನಲಾಗಿದೆ.

ಭೂಕಂಪಿಸಿದ ಅನುಭವದಿಂದಾಗಿ ಜನರು ಮನೆಗಳಿಂದ, ವಾಣಿಜ್ಯ ಮಳಿಗೆಗಳಿಂದ ಹೊರಗೋಡಿದ್ದಾರೆ. ಭೂಕಂಪದಿಂದ ಯಾವುದೇ ಆಸ್ತಿಪಾಸ್ತಿ, ಜೀವಹಾನಿ ಸಂಭವಿಸಿರುವ ವರದಿಯಾಗಿಲ್ಲ.

ಕಳೆದ ಗುರುವಾರ ರಾಜಸ್ಥಾನದ ಅಲ್ವಾರ್ ನಲ್ಲಿ 4.2 ತೀವ್ರತೆಯ ಭೂಕಂಪಸ ಸಂಭವಿಸಿದ್ದು, ದೆಹಲಿಯಲ್ಲಿಯೂ ಇದರ ಪರಿಣಾಮ ಉಂಟಾಗಿತ್ತು. ದೆಹಲಿ, ನೋಯ್ಡಾ, ಗುರುಗ್ರಾಮ, ಫಾಜಿಯಾಬಾದ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಭೂಮಿ ಕಂಪಿಸಿ ದ್ದಾಗಿ ತಿಳಿದುಬಂದಿತ್ತು.

ಡಿ. 20ರ ಭಾನುವಾರ ರಾತ್ರಿ ಟೋಕಿಯೋ, ಜಪಾನ್ ನಲ್ಲಿಯೂ 6.3 ತೀವ್ರತೆಯ ಭೂಕಂಪ ಸಂಭವಿಸಿರುವುದಾಗಿ ಕೇಂದ್ರವು ಮಾಹಿತಿ ನೀಡಿದೆ.