Saturday, 14th December 2024

ಲೇಹ್’ನಲ್ಲಿ ಭೂಕಂಪ: 4.3 ತೀವ್ರತೆ ದಾಖಲು

ಲೇಹ್: ಮಂಗಳವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಅಲ್ಚಿ (ಲೇಹ್) ನ ಉತ್ತರ ಭಾಗದಲ್ಲಿ ಭೂಕಂಪದ ಅನುಭವವಾಗಿದೆ.

ಜಮ್ಮು ಮತ್ತು ಕಾಶ್ಮೀರದ ಅಲ್ಚಿ (ಲೇಹ್) ನ ಉತ್ತರ ಭಾಗದಲ್ಲಿ ಕೆಲವೇ ಸೆಕೆಂಡುಗಳ ಕಾಲ ಭೂಕಂಪದ ಅನುಭವವಾಗಿದ್ದು, ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.3 ದಾಖಲಾಗಿದೆ ಎಂದು ಭೂ ಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು ದೃಢಪಡಿಸಿದೆ.

ಭೂಕಂಪದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ  ಕೇಂದ್ರಬಿಂದು ವನ್ನು ಅಲ್ಚಿಯಿಂದ 186 ಕಿಮೀ ಉತ್ತರಕ್ಕೆ ಅಂದರೆ ಚೀನಾದಲ್ಲಿ ಎಂದು ಹೇಳಲಾಗಿದೆ.