Wednesday, 9th October 2024

ಗುವಾಹಟಿಯಲ್ಲಿ 3.5 ತೀವ್ರತೆಯ ಭೂಕಂಪ

ಗುವಾಹಟಿ: ಗುರುವಾರ ಅಸ್ಸೋಂನ ಗುವಾಹಟಿಯಲ್ಲಿ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ.

ಆದರೆ, ಭೂಕಂಪದಿಂದ ಯಾವುದೇ ಪ್ರಾಣಹಾನಿ ಮತ್ತು ಆಸ್ತಿ ಹಾನಿಯಾಗಿರುವ ಕುರಿತು ಇನ್ನೂ ವರದಿಯಾಗಿಲ್ಲ. ಗುರುವಾರ ಬೆಳಗ್ಗೆ 5.42ಕ್ಕೆ ಗುವಾ ಹಟಿಯಲ್ಲಿ ಭೂಮಿ ಕಂಪನದ ಅನುಭವವಾಗಿದೆ. ಭೂಕಂಪದ ಕೇಂದ್ರ ಬಿಂದುವನ್ನು 26.63 ಅಕ್ಷಾಂಶ ಮತ್ತು 92.08 ರೇಖಾಂಶದಲ್ಲಿ ಕಂಡು ಬಂದಿದೆ. 5 ಕಿಮೀ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಎನ್‌ಸಿಎಸ್ ತಿಳಿಸಿದೆ.

 

ಕಳೆದ ಜೂನ್ ತಿಂಗಳಿನಲ್ಲೂ ಗುವಾಹಟಿ ನಗರದಲ್ಲಿ ಭೂಮಿ ಕಂಪಿಸಿರುವ ಕುರಿತು ವರದಿಯಾಗಿತ್ತು. ರಿಕ್ಟರ್ ಮಾಪಕದಲ್ಲಿ 4.8 ಭೂಕಂಪನದ ತೀವ್ರತೆ ದಾಖಲಾಗಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ ಮಾಹಿತಿ ನೀಡಿತ್ತು. ಬಾಂಗ್ಲಾದೇಶದ ಸಿಲ್ಹೆಟ್ ಪ್ರದೇಶದ 70 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಕಂಡು ಬಂದಿತ್ತು. ಆಗ 20 ಸೆಕೆಂಡುಗಳವರೆಗೆ ಭೂಮಿ ನಡುಗಿತ್ತು. ಅಸ್ಸೋಂನ ಗುವಾಹಟಿ ಹಾಗೂ ಈಶಾನ್ಯ ಪ್ರದೇಶದ ಇತರ ಭಾಗದ ಜನರಿಗೆ ಭೂಕಂಪನದ ಅನುಭವ ಆಗಿತ್ತು. ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಅದೇ ಜೂನ್​ ತಿಂಗಳಲ್ಲಿ ಅಸ್ಸೋಂನಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿದ ಘಟನೆ ನಡೆದಿತ್ತು. ತೇಜ್ಪುರದ ಪಶ್ಚಿಮದಿಂದ 39 ಕಿ.ಮೀ ದೂರದಲ್ಲಿ 10 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರ ಪತ್ತೆಯಾಗಿತ್ತು. ರಿಕ್ಟರ್ ಮಾಪಕದಲ್ಲಿ 3.6 ಭೂಕಂಪದ ತೀವ್ರತೆ ದಾಖಲಾಗಿತ್ತು.