Wednesday, 11th December 2024

ಇ-ಕಾಮರ್ಸ್ ಉದ್ಯಮಕ್ಕೆ ಸಾರಿಗೆಯ ಆವಿಷ್ಕಾರ ಮತ್ತು ಕ್ರಾಂತಿಕಾರಕಗೊಳಿಸುವುದರ ಮುಂದುವರಿಕೆ

ಅಮೆಜಾನ್ ಇಂಡಿಯಾ ಮತ್ತು ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರಗಳಿಂದ ಭಾರತದಲ್ಲಿ ಇ-ಕಾಮರ್ಸ್ ಗೆ ಸಾರಿಗೆಯನ್ನು ಕ್ರಾಂತಿಕಾರಕಗೊಳಿಸಲು ಒಡಂಬಡಿಕೆಗೆ ಸಹಿ ಹಾಕಿದ ಮೊದಲ ಕಂಪನಿ; 

ನವದೆಹಲಿ: ಮಹತ್ತರ ಬೆಳವಣಿಗೆಯಲ್ಲಿ ಅಮೆಜಾನ್ ಇಂಡಿಯಾ ಮತ್ತು ಬಂದರುಗಳು, ಹಡಗು ಮತ್ತು ಜಲಸಾರಿಗೆಗಳ ಸಚಿವಾ ಲಯದ ಅಡಿಯಲ್ಲಿರುವ ಇನ್ ಲ್ಯಾಂಡ್ ವಾಟರ್ ವೇಸ್ ಅಥಾರಿಟಿ ಆಫ್ ಇಂಡಿಯಾ(ಐಡಬ್ಲ್ಯೂಎಐ) ಗ್ರಾಹಕರ ಪ್ಯಾಕೇಜ್ ಗಳನ್ನು ಆಂತರಿಕ ಜಲಮಾರ್ಗಗಳ ಮೂಲಕ ವರ್ಗಾಯಿಸುವ ಪರಿವರ್ತನೀಯ ಪ್ರಯಾಣ ಕೈಗೊಳ್ಳುವ ಕುರಿತು ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿವೆ.

ಈ ಬೆಳವಣಿಗೆಯಿಂದ ಅಮೆಜಾನ್ ಇಂಡಿಯಾ ದೇಶದಲ್ಲಿ ಒಳನಾಡು ಜಲಸಾರಿಗೆ ಬಳಸುವ ಮೊದಲ ಇ-ಕಾಮರ್ಸ್ ಕಂಪನಿ ಯಾಗ ಲಿದ್ದು ಭಾರತದಲ್ಲಿ ತನ್ನ ಸಾರಿಗೆ ಮೂಲಸೌಕರ್ಯವನ್ನು ಸದೃಢಗೊಳಿಸಲು ತನ್ನ ದೀರ್ಘಾವಧಿ ಬದ್ಧತೆಯನ್ನು ಮರು ದೃಢೀಕರಿಸಿದೆ. ಐಡಬ್ಲ್ಯೂಎಐನೊಂದಿಗೆ ಈ ಸಹಯೋಗವು ಒಳನಾಡು ಜಲಮಾರ್ಗ ಗಳನ್ನು ಕೈಗೆಟುಕುವ ಮತ್ತು ಸುಸ್ಥಿರ ಸಾರಿಗೆ ವಿಧಾನವಾಗಿ ಬಳಸುವ ಮಾನ್ಯ ಪ್ರಧಾನಮಂ‍ತ್ರಿಗಳ ಧ್ಯೇಯೋದ್ದೇಶಕ್ಕೆ ಪೂರಕ ವಾಗಿದೆ.

ಈ MoU ಅಡಿಯಲ್ಲಿ ಅಮೆಜಾನ್ ಇಂಡಿಯಾ ಮತ್ತು ಐಡಬ್ಲ್ಯೂಎಐ ಕಂಟೈನರೈಸ್ಡ್ ಕಾರ್ಗೊ ಚಲನೆಗೆ ಅವಕಾಶ ನೀಡಲು ಮತ್ತು ಒಳನಾಡು ಜಲಸಾರಿಗೆ ಬಳಕೆಯ ಜಾಲ ನಿರ್ಮಿಸಲು ಒಟ್ಟಿಗೆ ಶ್ರಮಿಸಲಿವೆ. ಅಮೆಜಾನ್ ಇಂಡಿಯಾ ತನ್ನ ಪೂರೈಕೆ ಸರಣಿಯ ಭಾಗವಾಗಿ ಒಳನಾಡು ಜಲಸಾರಿಗೆಯ ಆವಿಷ್ಕಾರ ಪ್ರಾರಂಭಿಸಲಿದೆ ಮತ್ತು ಪಾಟ್ನಾದಿಂದ ಕೊಲ್ಕತಾ ಜಲಮಾರ್ಗಗಳ ಪ್ರಾಯೋಗಿಕ ಕಾರ್ಯಾಚರಣೆಯನ್ನು ಐಡಬ್ಲ್ಯೂಎಐ ಮತ್ತು ಅದರ ಕ್ಯಾರಿಯರ್ ಗಳ ಮೂಲಕ ಪ್ರಾರಂಭಿಸಲಿದೆ. ಇದು ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಮತ್ತು ಗ್ರಾಹಕರ ಬೇಡಿಕೆ ಪೂರೈಸಲು ಇ-ಕಾಮರ್ಸ್ ಉದ್ಯಮಕ್ಕೆ ಪರಸ್ಪರ ಪ್ರಯೋಜನಕರ ಯೋಜನೆಗಳನ್ನು ಆವಿಷ್ಕರಿಸಲು ಸರ್ಕಾರಿ ಸಂಸ್ಥೆಗಳೊಂದಿಗೆ ಸಹಯೋಗಕ್ಕೆ ಅಮೆಜಾನ್ ಇಂಡಿಯಾದ ಬದ್ಧತೆಯ ಮರು ದೃಢೀಕರಣವಾಗಿದೆ.

ಮಾನ್ಯ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಕ್ಯಾಬಿನೆಟ್ ಸಚಿವರಾದ ಶ್ರೀ ಸರ್ಬಾನಂದ ಸೋನಾವಾಲ್, “ಅಮೆಜಾನ್ ಇಂಡಿಯಾದೊಂದಿಗೆ ಈ ಒಡಂಬಡಿಕೆಯು ಭಾರತದ ಒಳನಾಡು ಜಲಸಾರಿಗೆಯ ಸಾಮರ್ಥ್ಯ ಪೂರೈಸಲು ಗಮನಾರ್ಹ ಹೆಜ್ಜೆ ಯಾಗಿದೆ. ನಮ್ಮ ಆದ್ಯತೆ ನದಿ ವ್ಯವಸ್ಥೆಯಲ್ಲಿ ಸರಕು ಸಾಗಣೆ ಹೆಚ್ಚಿಸುವುದಾಗಿದೆ, ಅದು ಸುಸ್ಥಿರ ಮತ್ತು ಕಡಿಮೆ ವೆಚ್ಚದ ಸಾರಿಗೆ ವಿಧಾನವಾಗಿದೆ. ಅಮೆಜಾನ್ ಇಂಡಿಯಾಗೆ ಐಡಬ್ಲ್ಯೂಎಐನೊಂದಿಗೆ ಜಮಾರ್ಗಗಳ ಸಾರಿಗೆ ಪರಿಹಾರ ಸೃಷ್ಟಿಸಲು ಸಹಯೋಗಕ್ಕೆ ಅಭಿನಂದಿಸುತ್ತೇನೆ. ಈ ಉಪಕ್ರಮವು ಭಾರತದ ತೀವ್ರವಾಗಿ ವಿಸ್ತರಿಸುತ್ತಿರುವ ಇ-ಕಾಮರ್ಸ್ ವಲಯಕ್ಕೆ ಸುಸ್ಥಿರ ಲಾಜಿಸ್ಟಿಕ್ಸ್ ಪರಿಹಾರದ ಪ್ರಾಮುಖ್ಯತೆಯ ಪ್ರತಿಫಲನವಾಗಿದೆ” ಎಂದರು.

ಐಡಬ್ಲ್ಯೂಎಐ ಮತ್ತು ಅಮೆಜಾನ್ ಇಂಡಿಯಾ ನಡುವೆ ಈ ಕಾರ್ಯತಂತ್ರೀಯ ಸಹಯೋಗವು ಸರಕು ಸಾಗಣೆಯಲ್ಲಿ ಆವಿಷ್ಕಾರ, ಸುಸ್ಥಿರತೆ ಮತ್ತು ದಕ್ಷತೆಯನ್ನು ಉತ್ತೇಜಿಸಲಿದ್ದು ಭಾರತದ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಲಿದೆ.

“ಕಳೆದ ಹಲವು ವರ್ಷಗಳಿಂದ ದೇಶದಲ್ಲಿ ನಮ್ಮ ಫುಲ್ ಫಿಲ್ ಮೆಂಟ್, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯ ನಿರ್ಮಿಸಲು ಹಲವಾರು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಅಮೆಜಾನ್ ಇಂಡಿಯಾ ಮತ್ತು ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರದ ನಡುವಿನ ಒಡಂಬಡಿಕೆಯು ದೇಶದ ವಿಸ್ತಾರ ಒಳನಾಡು ಜಲಮಾರ್ಗಗಳನ್ನು ಬಳಸಿಕೊಳ್ಳುವಲ್ಲಿ ಎಲ್ಲ ಇ-ಕಾಮರ್ಸ್ ಕಂಪನಿಗಳಿಗೆ ಹೊಸ ಸಾಧ್ಯತೆಗಳನ್ನು ತೆರೆಯಲಿದೆ. ಲಾಜಿಸ್ಟಿಕ್ಸ್ ಭವಿಷ್ಯವನ್ನು ಪರಿವರ್ತಿಸುವ ನಮ್ಮ ಜಾಗತಿಕ ಯೋಜನೆಗೆ ನಾವು ಬದ್ಧರಾಗಿದ್ದೇವೆ ಮತ್ತು ದೇಶದ ನದಿಗಳು, ಕಾಲುವೆಗಳು ಮತ್ತಿತರೆ ಜಲಮೂಲಗಳ ಸಾಮರ್ಥ್ಯ ಬಳಸಿ ಕೊಳ್ಳುವ ಮೂಲಕ ಭಾರತದ ಇ-ಕಾಮರ್ಸ್ ಉದ್ಯಮಕ್ಕೆ ಲಾಜಿಸ್ಟಿಕ್ಸ್ ಮತ್ತು ಸಾರಿಗೆ ದಕ್ಷತೆಯನ್ನು ಹೆಚ್ಚಿಸಲಿದೆ” ಎಂದು ಅಮೆಜಾನ್ ಇಂಡಿಯಾದ ಆಪರೇಷನ್ಸ್ ಉಪಾಧ್ಯಕ್ಷ ಅಭಿನವ್ ಸಿಂಗ್ ಹೇಳಿದರು.

ಒಳನಾಡು ಜಲಮಾರ್ಗಗಳ ಕಾರ್ಯಾಚರಣೆಗಳ ಪ್ರಾರಂಭದಿಂದ ಅಮೆಜಾನ್ ದೇಶದಲ್ಲಿ ರೈಲು, ವಾಯು, ಜಲ ಮತ್ತು ಭೂ ಸಾರಿಗೆ ಒಳಗೊಂಡು ಎಲ್ಲ ಮಾದರಿಗಳನ್ನು ಬಳಸಲು ಶಕ್ತವಾಗಿದ್ದು ಗ್ರಾಹಕರ ಪ್ಯಾಕೇಜ್ ಗಳನ್ನು ವೇಗ, ವೆಚ್ಚ ಉಳಿಸುವ, ಸುಸ್ಥಿರ ಮತ್ತು ಹೆಚ್ಚು ವಿಶ್ವಾಸಾರ್ಹ ರೀತಿಯಲ್ಲಿ ನೀಡುತ್ತಿದ್ದು ಕೋಟ್ಯಂತರ ಮಾರಾಟಗಾರರ ವಿಸ್ತಾರ ವ್ಯಾಪ್ತಿ ನೀಡಲಿದೆ.