Friday, 13th December 2024

ಅಬಕಾರಿ ನೀತಿ ಹಗರಣ: 40 ಸ್ಥಳಗಳಲ್ಲಿ ಇಡಿ ದಾಳಿ

ವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿನ ಅಕ್ರಮ ಹಣ ವರ್ಗಾ ವಣೆಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಶುಕ್ರವಾರ ದೇಶದಾದ್ಯಂತ ಸುಮಾರು 40 ಸ್ಥಳಗಳಲ್ಲಿ ದಾಳಿ ನಡೆಸಿದೆ.

ನೆಲ್ಲೂರು ಸೇರಿ ಆಂಧ್ರಪ್ರದೇಶದ ಕೆಲ ನಗರಗಳು, ಕರ್ನಾಟಕ, ತಮಿಳುನಾಡು ಮತ್ತು ದೆಹಲಿ-ಎನ್‌ಸಿಆರ್‌ನ ಇತರ ಕೆಲವು ನಗರ ಗಳಲ್ಲಿ ಮದ್ಯದ ಉದ್ಯಮಿ ಗಳು, ವಿತರಕರು ಮತ್ತು ಸರಬರಾಜು ಜಾಲಗಳ ಮೇಲೆ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಇ.ಡಿ ಸೆ.6 ರಂದು ದೇಶದಾದ್ಯಂತ ಸುಮಾರು 45 ಸ್ಥಳಗಳಲ್ಲಿ ಮೊದಲ ಬಾರಿಗೆ ದಾಳಿ ನಡೆಸಿತ್ತು.

ದೆಹಲಿಯ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಕುರಿತು ಸಿಬಿಐ ಮೊದಲ ಬಾರಿಗೆ ಎಫ್‌ಐಆರ್‌ ದಾಖಲಿಸಿತ್ತು. ನಂತರ ಇ.ಡಿ ಕೂಡ ತನಿಖೆ ಕೈಗೊಂಡಿದೆ. ಸಿಬಿಐ ಎಫ್‌ಐಆರ್‌ನಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಕೆಲವು ಅಧಿಕಾರಿ ಗಳನ್ನು ಆರೋಪಿಗಳಾಗಿ ಹೆಸರಿಸಲಾಗಿದೆ.

ಸಿಸೋಡಿಯ ಮೇಲಿನ ದಾಳಿಯು ರಾಜಕೀಯ ಪ್ರೇರಿತ ಎಂದು ಆರೋಪಿಸಲಾಗಿತ್ತು. ಹೀಗಾಗಿ ಎಎಪಿ ಮತ್ತು ಬಿಜೆಪಿ ನಡುವೆ ರಾಜಕೀಯ ವಾಗ್ಯುದ್ಧ ನಡೆದಿತ್ತು.