Wednesday, 11th December 2024

ಕೋಳಿ ಮೊಟ್ಟೆ ಉತ್ಪಾದನೆಯಲ್ಲಿ ಆಂಧ್ರಪ್ರದೇಶ ರಾಜ್ಯಕ್ಕೆ ಮೊದಲ ಸ್ಥಾನ

ಆಂಧ್ರಪ್ರದೇಶ: ಕೇಂದ್ರ ಪಶುಸಂಗೋಪನಾ ಸಚಿವಾಲಯದ ಸಮೀಕ್ಷೆಯಲ್ಲಿ ಎಪಿ ಕೋಳಿ ಮೊಟ್ಟೆ ಉತ್ಪಾದನೆ ಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಬಹಿರಂಗಪಡಿಸಿದೆ.

ಕೋಳಿ ಮೊಟ್ಟೆ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದೆ ಎಂದು ಹೊಸದಾಗಿ ಬಿಡುಗಡೆ ಮಾಡಿರುವ ಸಮೀಕ್ಷೆ ತಿಳಿಸಿದೆ. ಕೋಳಿ ಮೊಟ್ಟೆಗಳ ಲಭ್ಯತೆ ಮತ್ತು ಉತ್ಪಾದನೆಯಲ್ಲಿ ಎಪಿ ಮೊದಲ ಸ್ಥಾನದಲ್ಲಿದ್ದರೆ. ಪ್ರತಿ ವರ್ಷ ತಲಾ 501 ಮೊಟ್ಟೆಗಳ ಹೆಚ್ಚುವರಿ ಲಭ್ಯತೆಯೊಂದಿಗೆ ನಂಬರ್-1 ಸ್ಥಾನದಲ್ಲಿದೆ.

1950-51ರಲ್ಲಿ ನಮ್ಮ ದೇಶದಲ್ಲಿ ಕೋಳಿ ಮೊಟ್ಟೆಗಳ ತಲಾವಾರು ಲಭ್ಯತೆ ವರ್ಷಕ್ಕೆ ಕೇವಲ ಐದು ಇತ್ತು. 1968-69ರಲ್ಲಿ ಪ್ರಥಮ ಬಾರಿಗೆ ರಾಷ್ಟ್ರಮಟ್ಟ ದಲ್ಲಿ ತಲಾ ಸರಾಸರಿ ಮೊಟ್ಟೆಯ ಲಭ್ಯತೆ 10ಕ್ಕೆ ತಲುಪಿದೆ ಎಂದು ಸಮೀಕ್ಷೆ ಹೇಳಿದೆ. 2020-21ರಲ್ಲಿ ರಾಷ್ಟ್ರಮಟ್ಟದಲ್ಲಿ ತಲಾವಾರು ಮೊಟ್ಟೆಗಳ ಲಭ್ಯತೆ 2021-22ರಲ್ಲಿ 95ಕ್ಕೆ ತಲುಪಿದೆ ಎಂದು ತಿಳಿದುಬಂದಿದೆ.

ಕೋಳಿ ಮೊಟ್ಟೆ ಉತ್ಪಾದನೆಯಲ್ಲಿ ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ತಮಿಳುನಾಡು ಎರಡನೇ ಸ್ಥಾನ, ತೆಲಂಗಾಣ ಮೂರನೇ ಸ್ಥಾನ, ಪಶ್ಚಿಮ ಬಂಗಾಳ ನಾಲ್ಕನೇ ಸ್ಥಾನ, ಕರ್ನಾಟಕ ಐದನೇ ಸ್ಥಾನ ಪಡೆದುಕೊಂಡಿದೆ.