Saturday, 14th December 2024

ಚುನಾವಣಾ ಕರ್ತವ್ಯನಿರತ ಅಧಿಕಾರಿ ಹೃದಯಾಘಾತದಿಂದ ಸಾವು

ಬಿಹಾರ: ಮತಗಟ್ಟೆ ಅಧಿಕಾರಿಯೊಬ್ಬರು ಚುನಾವಣಾ ಕರ್ತವ್ಯನಿರತರಾಗಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬಿಹಾರದಲ್ಲಿ 15 ಜಿಲ್ಲೆಗಳ 78 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯ ಬಿರುಸಿನ ಚಟುವಟಿಕೆ ವೇಳೆ ದುರಂತ ಸಂಭವಿಸಿದೆ. ಮುಜಾಫರ್ ಜಿಲ್ಲೆಯ ಕತ್ರಾ ಬ್ಲಾಕ್​ನ 190ನೇ ಮತಕೇಂದ್ರಕ್ಕೆ ನಿಯೋಜಿತರಾಗಿದ್ದ ಮತಗಟ್ಟೆ ಅಧಿಕಾರಿ ಕೇದಾರ್ ರಾಜ್​ ಸಾವಿಗೀಡಾಗಿದ್ದಾರೆ. ರಾಜ್ಯ ನೀರಾವರಿ ಇಲಾಖೆಯ ಅಧಿಕಾರಿಯಾಗಿರುವ ಇವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.