Saturday, 14th December 2024

Election Result 2024: ಹರಿಯಾಣದಲ್ಲಿ ಹ್ಯಾಟ್ರಿಕ್‌ನತ್ತ ಬಿಜೆಪಿ ದಾಪುಗಾಲು; ಕಮಲಪಾಳಯದಲ್ಲಿ ಗೆಲುವಿನ ನಗೆ

Haryana assembly election (3)

ಚಂಢೀಗಡ: ಹರಿಯಾಣದಲ್ಲಿ ಮತ ಎಣಿಕೆ ಪ್ರಕ್ರಿಯೆ(Election result 2024)ಯು ಬಿಜೆಪಿಗೆ ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿದ್ದು, ಮತ್ತೊಮ್ಮೆ ನಾವು ಸರ್ಕಾರ ಖಂಡಿತ ರಚಿಸುತ್ತೇವೆ ಎಂಬ ನಂಬಿಕೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ, ಡಾ. ಸುಧಾಂಶು ತ್ರಿವೇದಿ(Dr. Sudhanshu Trivedi) ಹೇಳಿದ್ದಾರೆ. ಹರಿಯಾಣ ಮತ್ತು ಜಮ್ಮು ಕಾಶ್ಮೀರ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ(Counting) ಭಾರೀ ಬಿರುಸಿನಿಂದ ಸಾಗಿದ್ದು,ಹರಿಯಾಣ ಫಲಿತಾಂಶದ ಚಿತ್ರಣವೇ ಕೆಲವೇ ಕೆಲವು ಕ್ಷಣದಲ್ಲಿ ಬದಲಾಗಿದೆ. ಭಾರೀ ಮುನ್ನಡೆ ಕಾಯ್ಡುಕೊಂಡು ಅರ್ಧ ಶತಕ ದಾಟಿ ಗೆಲುವಿನತ್ತ ದಾಪುಗಾಲಿಡುತ್ತಿದ್ದ ಕಾಂಗ್ರೆಸ್‌ ಏಕಾಏಕಿ ಹಿನ್ನಡೆ ಅನುಭವಿಸಿದೆ.

ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸುಧಾಂಶು, ಹರಿಯಾಣದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ಸಿಗುವ ವಿಶ್ವಾಸ ನಮಗಿದೆ. ಜಮ್ಮು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಲಾಗಿದೆ. ಉತ್ಸಾಹ, ಸಾರ್ವಜನಿಕರು ನಿರ್ಣಾಯಕ ಮತ್ತು ಐತಿಹಾಸಿಕ ತೀರ್ಪನ್ನು ನೀಡಲಿದ್ದಾರೆ ಮತ್ತು ಇದುವರೆಗಿನ ಬಿಜೆಪಿಯ ಸಾಧನೆ ಅತ್ಯುತ್ತಮವಾಗಿದೆ ಎಂದು ಹೇಳಿದ್ದಾರೆ.

ಹರ್ಯಾಣದಲ್ಲಿ ಏಕಾಏಕಿ ಸ್ಥಾನಗಳ ಸಂಖ್ಯೆ ಬದಲಾಗಿದ್ದು, 50ಕ್ಕೂ ಅದಿಕ ಸ್ಥಾನಗಳನ್ನು ಗಳಿಸಿ ಬಿಜೆಪಿಯನ್ನು ಹಿಂದಿಕ್ಕಿದ್ದ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿದೆ. ಬಿಜೆಪಿ ಸ್ಥಾನಗಳು ನಿಧಾನವಾಗಿ ಏರಿಕೆ ಕಂಡಿದ್ದು, ಗೆಲುವಿನ ಮ್ಯಾಜಿಕ್‌ ನಂಬರ್‌ ದಾಟಿದೆ.

ಸದ್ಯ ಬಿಜೆಪಿ 49, ಕಾಂಗ್ರೆಸ್‌ 35 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆ ಮೂಲಕ ಹ್ಯಾಟ್ರಿಕ್‌ ಗೆಲುವಿನ ಕನಸು ಹೊತ್ತಿರುವ ಬಿಜೆಪಿಗೆ ಕೊಂಚ ನಿರಾಳ ಎಂದೆನಿಸಿದೆ. ಹರಿಯಾಣದಲ್ಲಿ ಬಹುಮತಕ್ಕೆ 46ಸ್ಥಾನಗಳು ಬೇಕಾಗಿದ್ದು, ಈಗಾಗಲೇ ಬಿಜೆಪಿ ಅಷ್ಟೂ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆ ಮೂಲಕ ಬರೋಬ್ಬರಿ ದಶಕದ ನಂತರ ಗದ್ದುಗೆ ಏರುವ ಕಾಂಗ್ರೆಸ್‌ ಕನಸು ಭಗ್ನವಾಗುವ ಆತಂಕ ಇದೆ. ಇನ್ನು ಜಮ್ಮು-ಕಾಶ್ಮೀರದಲ್ಲಿ ಎನ್‌ಸಿ-ಕಾಂಗ್ರೆಸ್‌ ಮೈತ್ರಿಕೂಟ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು, ಸರ್ಕಾರ ರಚನೆ ಬಹುತೇಕ ಖಚಿತ ಆಗಿದೆ

ಈ ಸುದ್ದಿಯನ್ನೂ ಓದಿ: Assembly Election result: ಬಹಳ ಕುತೂಹಲ ಕೆರಳಿಸಿರುವ ಹರಿಯಾಣ, ಕಾಶ್ಮೀರ ಎಲೆಕ್ಷನ್‌ ರಿಸಲ್ಟ್‌ ಇಂದು ಪ್ರಕಟ