Saturday, 14th December 2024

ದಿನಗೂಲಿ ಕೆಲಸದಾಕೆಗೆ 1.49 ಲಕ್ಷ ರೂ ಕರೆಂಟ್‌ ಬಿಲ್

ಅನಂತಪುರ: ದಿನಗೂಲಿ ಮಾಡುವ ಕೆಲಸದಾಕೆಗೆ 1.49 ಲಕ್ಷ ರೂ ಬಿಲ್ ಪಾವತಿಸುವಂತೆ ಬಿಲ್ ಕಳುಹಿಸಿದೆ.

ಆಂಧ್ರ ಪ್ರದೇಶದ ಅನಂತಪುರದಲ್ಲಿ ಈ ಘಟನೆ ನಡೆದಿದೆ. ಕನೇಕಲ್ ಮಂಡಲ್ ಕೇಂದ್ರ ಕಚೇರಿಯ ಜಿಲ್ಲಾ ಪರಿಷತ್ ಬಾಲಕರ ಪ್ರೌಢ ಶಾಲೆಯ ಬಳಿ ಇರುವ ಸಣ್ಣ ಮನೆಗೆ 1,49,034 ರೂಗಳ ವಿದ್ಯುತ್ ಬಿಲ್ ನೀಡಲಾಗಿದೆ. ದಿನಗೂಲಿ ನೌಕರ ನಾಗಮ್ಮ ಬಿಲ್ ನೋಡಿ ಆಘಾತಕ್ಕೊಳಗಾಗಿದ್ದು, ತಮ್ಮ ಮನೆಯ ವಿದ್ಯುತ್ ಬಿಲ್ 100 ರೂ ಕೂಡ ಮೀರುತ್ತಿರಲಿಲ್ಲ. ಆದರೆ ಈ ಬಾರಿ 1.49 ಲಕ್ಷ ರೂ ಬಿಲ್ಲ್ ಬಂದಿದೆ ಎಂದು ಹೇಳಿದ್ದಾರೆ.

ಒಂದು ಟ್ಯೂಬ್ ಲೈಟ್, ಫ್ಯಾನ್ ಮತ್ತು ಟಿವಿ ಮಾತ್ರ ಇದ್ದು, ಇಷ್ಟೊಂದು ಬಿಲ್ ಬಂದಿರುವುದು ಏಕೆ ಎಂದು ತಿಳಿಯುತ್ತಿಲ್ಲ. ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಕೆಲಸವಿರಲ್ಲಿಲ್ಲ. ಆದರೆ ಅಷ್ಟೂ ತಿಂಗಳ ಬಿಲ್ ಒಟ್ಟಿಗೆ ಬಂದರೂ 1ಸಾವಿರ ರೂ ದಾಟುವು ದಿಲ್ಲ. ಆದರೆ 1.49 ಲಕ್ಷ ರೂ ಬಿಲ್ ಬಂದಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಅಸಿಸ್ಟೆಂಟ್ ಎಂಜಿನಿಯರ್ ಶ್ರೀನಿವಾಸ್ ರೆಡ್ಡಿ ಅವರ ಗಮನಕ್ಕೆ ತಂದಾಗ, ಹೆಚ್ಚುವರಿ ಬಿಲ್ಲಿಂಗ್ ತಾಂತ್ರಿಕ ದೋಷಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. ವಿಷಯವನ್ನು ಪರಿಹರಿಸಿದ ನಂತರ ಗ್ರಾಹಕರಿಗೆ ಮೊದಲಿನಂತೆ ಸಾಮಾನ್ಯ ಬಿಲ್ ಸಿಗುತ್ತದೆ” ಎಂದು ಅವರು ಹೇಳಿದರು.