Saturday, 23rd November 2024

Elon Musk: ಟ್ರಂಪ್ ಅಧ್ಯಕ್ಷರಾದ ಬಳಿಕ ಎಲೋನ್ ಮಸ್ಕ್ ಸಂಪತ್ತಿನಲ್ಲಿ ಭಾರಿ ಹೆಚ್ಚಳ!

Elon Musk

ಅಮೆರಿಕ ಅಧ್ಯಕ್ಷರಾಗಿ ಡೋನಾಲ್ಡ್ ಟ್ರಂಪ್ (Donald Trump) ಅಧಿಕೃತವಾಗಿ ಆಯ್ಕೆಯಾದ ಬಳಿಕ ಉದ್ಯಮಿ ಎಲೋನ್ ಮಸ್ಕ್ (Elon Musk) ಅವರ ನಿವ್ವಳ ಮೌಲ್ಯದಲ್ಲಿ 70 ಶತಕೋಟಿ ಡಾಲರ್ ಹೆಚ್ಚಳವಾಗಿದ್ದು, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಅವರು ಗುರುತಿಸಿಕೊಂಡಿದ್ದಾರೆ.

ಟ್ರಂಪ್ ಗೆಲುವಿನ ಬಳಿಕ ಎಲೋನ್ ಮಸ್ಕ್ ತಮ್ಮ ದಾಖಲೆಯನ್ನೇ ಮುರಿದು ನಿವ್ವಳ ಮೌಲ್ಯವನ್ನು 70 ಶತಕೋಟಿ ಡಾಲರ್ ಹೆಚ್ಚಿಸಿಕೊಂಡಿದ್ದಾರೆ.

ಎಲೋನ್ ಮಸ್ಕ್ ಅವರ ಟೆಸ್ಲಾ, ಎಐ ಕಂಪನಿ ಎಕ್ಸ್ ಎಐ ಸ್ಟಾಕ್ ಗಗನಕ್ಕೇರುತ್ತಿದೆ. ನವೆಂಬರ್ 22 ರಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅವರ ನಿವ್ವಳ ಮೌಲ್ಯವು 340 ಶತಕೋಟಿ ಡಾಲರ್ ಅನ್ನು ಮೀರಿದೆ ಎಂದು ವರದಿಗಳು ಸೂಚಿಸಿವೆ.

ಎಲೋನ್ ಮಸ್ಕ್ ಅವರ ನಿವ್ವಳ ಮೌಲ್ಯವು ಚುನಾವಣೆಯ ಅನಂತರ 340 ಬಿಲಿಯನ್ ಡಾಲರ್ ತಲುಪಿದೆ. ಟ್ರಂಪ್ ಅವರ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಎಲೋನ್ ಮಸ್ಕ್ ಅವರ ಅದೃಷ್ಟ ಖುಲಾಯಿಸಿದೆ. ಚುನಾವಣೆಯ ಅನಂತರದ ದಿನಗಳಲ್ಲಿ ಟೆಸ್ಲಾ ಷೇರುಗಳ ಬೆಲೆಯು ಶೇ. 40ರಷ್ಟು ಹೆಚ್ಚಳವಾಗಿದೆ.

ಶುಕ್ರವಾರದ ಮಾರುಕಟ್ಟೆಯ ಮುಕ್ತಾಯದ ವೇಳೆಗೆ ಮಸ್ಕ್‌ನ ನಿವ್ವಳ ಮೌಲ್ಯವು 321.7 ಶತಕೋಟಿ ಡಾಲರ್ ತಲುಪಿ ದಾಖಲೆ ಬರೆದಿದೆ. ಟೆಸ್ಲಾ 7 ಶತಕೋಟಿ ಡಾಲರ್ ಲಾಭವನ್ನು ಹೆಚ್ಚಿಸಿಕೊಂಡಿದೆ. ಇದು ಕಳೆದ ಮೂರುವರೆ ವರ್ಷದಲ್ಲಿ ಗರಿಷ್ಠ ಮಟ್ಟವನ್ನು ತಲುಪಿದೆ. ಟೆಸ್ಲಾವು ಸಾಂಕ್ರಾಮಿಕ ಯುಗದ ಸಮಯ 2021ರ ನವೆಂಬರ್ ನಲ್ಲಿ ದಾಖಲಾಗಿದ್ದ ಗರಿಷ್ಠ 320.3 ಬಿಲಿಯನ್ ಡಾಲರ್ ಅನ್ನು ಮೀರಿಸಿದೆ.

Elon Musk

ಟ್ರಂಪ್ ಅವರ ಆಡಳಿತದಲ್ಲಿ ಎಲೋನ್ ಮಸ್ಕ್ ಪ್ರಭಾವವು ಟೆಸ್ಲಾಗೆ ಅನುಕೂಲಕರವಾದ ನಿಯಮಗಳಿಗೆ ಕಾರಣವಾಗಬಹುದು ಎಂದು ಹಲವರು ನಂಬಿದ್ದರು. ಕಂಪನಿಯ ಅತಿದೊಡ್ಡ ಷೇರುದಾರರಾಗಿ, ಚುನಾವಣೆಯ ಅನಂತರ ಸ್ಪೇಸ್ ಎಕ್ಸ್ ಸಿಇಒ ಅವರ ನಿವ್ವಳ ಮೌಲ್ಯವು ಅಂದಾಜು 83 ಶತಕೋಟಿ ಡಾಲರ್ ಏರಿಕೆ ಕಂಡಿದೆ.

ದಿ ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ, ಎಲೋನ್ ಮಸ್ಕ್ ಅವರ ಎಐ ಕಂಪೆನಿ ಎಕ್ಸ್ ಎಐ ಇತ್ತೀಚಿನ ವಾರಗಳಲ್ಲಿ 50 ಶತಕೋಟಿ ಡಾಲರ್ ಲಾಭಗಳಿಸಿದೆ. ಕಂಪೆನಿಯಲ್ಲಿ ಮಸ್ಕ್‌ ಶೇ. 60ರಷ್ಟು ಪಾಲಿನ ಸಂಪತ್ತಿಗೆ 13 ಬಿಲಿಯನ್ ಡಾಲರ್ ಸೇರಿದೆ. ಚುನಾವಣಾ ದಿನದಿಂದ ಅವರ ಸಂಪತ್ತಿನ ಮೌಲ್ಯ 70 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ.

ಫೋರ್ಬ್ಸ್ ಮೌಲ್ಯಮಾಪನದ ಪ್ರಕಾರ, ಮಸ್ಕ್ ಅವರ ನಿವ್ವಳ ಮೌಲ್ಯವು ಆರು ತಿಂಗಳ ಹಿಂದೆ 200 ಶತಕೋಟಿ ಡಾಲರ್ ಗಿಂತ ಕಡಿಮೆ ಇತ್ತು. ಚುನಾವಣೆ ಬಳಿಕ 315 ಶತಕೋಟಿ ಡಾಲರ್ ಹೆಚ್ಚಳವಾಗಿದೆ. ಈಗ 235 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಅವರ ಹತ್ತಿರದ ಪ್ರತಿಸ್ಪರ್ಧಿ ಲ್ಯಾರಿ ಎಲಿಸನ್‌ಗಿಂತ 80 ಶತಕೋಟಿ ಡಾಲರ್ ಹೆಚ್ಚು ಸಂಪತ್ತು ಗಳಿಸಿದ್ದಾರೆ.

Justin Trudeau: ದೇಶಾದ್ಯಂತ ಹಿಂಸಾಚಾರ ನಡೆಯುತ್ತಿದ್ದರೂ ಕೆನಡಾ ಪ್ರಧಾನಿ ಮೋಜು-ಮಸ್ತಿ! ಟೇಲರ್ ಸ್ವಿಫ್ಟ್ ಹಾಡಿಗೆ ಟ್ರುಡೊ ಭರ್ಜರಿ ಡಾನ್ಸ್‌

ಟೆಸ್ಲಾದಲ್ಲಿ ಮಸ್ಕ್‌ ಅವರು ಶೇ. 13ರಷ್ಟು ಪಾಲನ್ನು ಹೊಂದಿದ್ದಾರೆ. ಇದರ ಮೌಲ್ಯ 145 ಶತಕೋಟಿ ಡಾಲರ್ ಆಗಿದೆ. ಸಂಭಾವ್ಯ ಶೇ. 9ರಷ್ಟು ಇಕ್ವಿಟಿ ಸೇರಲು ಬಾಕಿಯಿದೆ.

ಸ್ಪೇಸ್‌ಎಕ್ಸ್ ಮೌಲ್ಯ 210 ಶತಕೋಟಿ ಡಾಲರ್ ಆಗಿದ್ದು, ಇದರಲ್ಲಿ ಶೇ. 42ರಷ್ಟು ಪಾಲನ್ನು ಅವರ ಸಂಪತ್ತಿಗೆ ಸೇರುತ್ತದೆ. ಇದು 88 ಶತಕೋಟಿ ಡಾಲರ್ ಆಗಿದೆ.