Saturday, 12th October 2024

ಉದ್ಯೋಗ ಕಡಿತ ಬಿಟ್ಟು ಬೇರೆ ಆಯ್ಕೆಯೇ ಇಲ್ಲ: ಎಲಾನ್ ಮಸ್ಕ್

ನವದೆಹಲಿ: ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್​​ ನ ಸಿಬ್ಬಂದಿಯ ವಜಾ ಪ್ರಕ್ರಿಯೆ ಆರಂಭಿಸಿರುವುದನ್ನು ಕಂಪನಿಯ ನೂತನ ಮಾಲೀಕ ಎಲಾನ್ ಮಸ್ಕ್ ಸಮರ್ಥಿಸಿಕೊಂಡಿದ್ದಾರೆ.

ಕಂಪನಿಯು ಪ್ರತಿ ದಿನ 40 ಲಕ್ಷ ಡಾಲರ್​ಗಿಂತಲೂ ಹೆಚ್ಚಿನ ಮೊತ್ತವನ್ನು ಕಳೆದುಕೊಳ್ಳು ತ್ತಿದೆ. ಹೀಗಾಗಿ ಉದ್ಯೋಗ ಕಡಿತದ ಹೊರತು ಬೇರೆ ಆಯ್ಕೆಯೇ ಇಲ್ಲ ಎಂದು ಅವರು ಹೇಳಿದ್ದಾರೆ. ಜಗತ್ತಿನ ಶ್ರೀಮಂತ ಉದ್ಯಮಿ, ಟೆಸ್ಲಾ ಕಂಪನಿಯ ಮಾಲೀಕರಾ ಗಿರುವ ಮಸ್ಕ್ ಕಳೆದ ವಾರವಷ್ಟೇ ಟ್ವಿಟರ್​ ಅನ್ನು ಸಂಪೂರ್ಣವಾಗಿ ತಮ್ಮ ತೆಕ್ಕೆಗೆ ತೆಗೆದು ಕೊಂಡಿದ್ದಾರೆ.

ಟ್ವೀಟ್ ಮಾಡಿರುವ ಮಸ್ಕ್, ‘ಕಂಪನಿಯು ಪ್ರತಿ ದಿನ 40 ಲಕ್ಷ ಡಾಲರ್​ಗಿಂತಲೂ ಹೆಚ್ಚಿನ ಮೊತ್ತವನ್ನು ಕಳೆದು ಕೊಳ್ಳುತ್ತಿರುವು ದರಿಂದ ದುರದೃಷ್ಟವಶಾತ್, ಉದ್ಯೋಗ ಕಡಿತ ಬಿಟ್ಟು ಬೇರೆ ಆಯ್ಕೆಯೇ ಇಲ್ಲದಾಗಿದೆ. ಉದ್ಯೋಗದಿಂದ ವಜಾಗೊಳ್ಳುವ ಸಿಬ್ಬಂದಿಗೆ 3 ತಿಂಗಳ ಕಾಲಾವಕಾಶ ನೀಡಲಾಗಿದೆ. ಇದು ಕಾನೂನುಬದ್ಧವಾಗಿ ನೀಡಬೇಕಾದ ಅವಕಾಶಕ್ಕಿಂತಲೂ ಶೇ.50ರಷ್ಟು ಹೆಚ್ಚಿನ ಸೌಲಭ್ಯವಾಗಿದೆ’ ಎಂದು ಉಲ್ಲೇಖಿಸಿದ್ದಾರೆ.

ಮಸ್ಕ್ ಅವರು ಟ್ವಿಟರ್​ನ ಮಾಲೀಕತ್ವ ವಹಿಸಿಕೊಂಡ ಬೆನ್ನಲ್ಲೇ ಸಿಇಒ ಪರಾಗ್ ಅಗರ್​ವಾಲ್ ಸೇರಿದಂತೆ ಪ್ರಮುಖ ಹುದ್ದೆಯ ಲ್ಲಿದ್ದವರನ್ನು ವಜಾಗೊಳಿಸಲಾಗಿತ್ತು. ಇದರ ಬೆನ್ನಲ್ಲೇ, ಕಂಪನಿಯ ಒಟ್ಟು 7,500 ಸಿಬ್ಬಂದಿಯ ಪೈಕಿ ಅರ್ಧದಷ್ಟು ಮಂದಿ ಯನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ.

ಭಾರತದಲ್ಲಿ ಟ್ವಿಟರ್ ಸಿಬ್ಬಂದಿ ವಜಾ ಪ್ರಕ್ರಿಯೆ ಶುಕ್ರವಾರ ಆರಂಭಗೊಂಡಿದೆ ಎಂದು ವರದಿಯಾಗಿದೆ.

ಉದ್ಯೋಗ ಕಡಿತದ ಭೀತಿಯಲ್ಲಿರುವ ಟ್ವಿಟರ್​ ಸಿಬ್ಬಂದಿ ಹೆಚ್ಚುವರಿ ಸಮಯ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿ ರುವ ಬಗ್ಗೆ ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಕೆಲವರು ಶುಕ್ರವಾರ ಮತ್ತು ಶನಿವಾರಗಳಂದು ಕೆಲಸದ ಅವಧಿ ಮುಗಿದ ಬಳಿಕ ಮನೆಗೆ ತೆರಳದೆ ಕಚೇರಿಯಲ್ಲಿಯೇ ಮಲಗಿದ್ದಾರೆ ಎಂದೂ ವರದಿಯಾಗಿತ್ತು.