Friday, 13th December 2024

ನಿರುದ್ಯೋಗದ ವಿರುದ್ಧ ಪ್ರತಿಭಟನೆ: ದೆಹಲಿ ಗಡಿಗಳಲ್ಲಿ ಭದ್ರತೆ ಬಿಗಿ

ನವದೆಹಲಿ: ನಿರುದ್ಯೋಗದ ವಿರುದ್ಧ ಪ್ರತಿಭಟಿಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಮತ್ತು ಇತರ ರೈತರ ಗುಂಪೊಂದು ಸೋಮವಾರ ದೆಹಲಿ ಯ ಜಂತರ್‌ ಮಂತರ್‌ ನಲ್ಲಿ ಮಹಾಪಂಚಾಯತ್‌ ಆಯೋಜಿಸಿದೆ.

ಈ ಹಿನ್ನೆಲೆಯಲ್ಲಿ ದೆಹಲಿ ಗಡಿಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಸೆಕ್ಷನ್ 144 ಅನ್ನು ವಿಧಿಸ ಲಾಗಿದೆ ಮತ್ತು ದೆಹಲಿಯ ಘಾಜಿಪುರ, ಸಿಂಘು ಮತ್ತು ಟಿಕ್ರಿಯ ಮೂರು ಗಡಿ ಪ್ರವೇಶ ಸ್ಥಳಗಳಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿ ದ್ದಾರೆ.

ಭಾರಿ ಪೊಲೀಸ್ ಮತ್ತು ಭದ್ರತಾ ಉಪಸ್ಥಿತಿಯ ನಡುವೆ ಪ್ರತಿಭಟನೆ ನಡೆಸಲು ರೈತರು ಜಂತರ್ ಮಂತರ್ ಗೆ ಬರಲು ಪ್ರಾರಂಭಿಸಿದ್ದಾರೆ.