Saturday, 14th December 2024

ಅನಂತ್‌ನಾಗ್‌ನಲ್ಲಿ ಶೂಟೌಟ್‌: ನಾಲ್ವರು ಉಗ್ರರ ಹತ್ಯೆ

ಶ್ರೀನಗರ: ಅನಂತ್‌ನಾಗ್‌ನಲ್ಲಿ ಬುಧವಾರ ಭಾರತೀಯ ಯೋಧರು ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.

ಅನಂತ್ ನಾಗ್ ಜಿಲ್ಲೆಯ ಶ್ರೀಗುಫ್ವಾರಾದ ಶಾಲ್‌ಗುಲ್ ಅರಣ್ಯ ಪ್ರದೇಶದಲ್ಲಿ ಶೂಟೌಟ್‌ ನಡೆದಿದ್ದು, ನಾಲ್ಕು ಮಂದಿ ಉಗ್ರರನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ.

ಈ ಹಿಂದೆ ಶ್ರೀನಗರದ ಭಾಗತ್ ಪ್ರದೇಶದ ಬರ್ಜುಲ್ಲಾ ಪ್ರದೇಶದಲ್ಲಿ ಅಂಗಡಿ ಮುಂದೆ ನಿಂತಿದ್ದ ಇಬ್ಬರು ಪೊಲೀಸರನ್ನು ಉಗ್ರ ನೋರ್ವ ಗುಂಡಿನ ದಾಳಿ ನಡೆಸಿ ಕೊಂದು ಹಾಕಿದ್ದ. ಬಳಿಕ ಸೇನೆ ಉಗ್ರ ನಿಗ್ರಹ ಕಾರ್ಯಾಚರಣೆ ಆರಂಭಿಸಿತ್ತು. ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಾರತೀಯ ಸೇನೆ ಬುಧವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅನಂತನಾಗ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ನಾಲ್ಕು ಉಗ್ರರನ್ನು ಹೊಡೆದುರುಳಿಸಿದೆ.

ಶಾಲ್‌ಗುಲ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಮಾಹಿತಿ ಪಡೆದ ಸಿಆರ್ ಪಿಎಫ್ ಯೋಧರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಉಗ್ರರು ಸೈನಿಕರತ್ತ ಗುಂಡಿನ ಮಳೆ ಗೈದಿದ್ದಾರೆ.