Friday, 13th December 2024

ಸಿಂಗ್‌ಭೂಮ್’ನಲ್ಲಿ ಎನ್‌ಕೌಂಟರ್‌: ನಕ್ಸಲರಿಗಾಗಿ ಶೋಧ ಕಾರ್ಯಾಚರಣೆ

ಚೈಬಾಸಾ(ಜಾರ್ಖಂಡ್): ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ಎನ್‌ಕೌಂಟರ್ ನಡೆದಿದೆ.

ಹಲವು ಸುತ್ತಿನ ಗುಂಡಿನ ಚಕಮಕಿ ಬಳಿಕ ನಕ್ಸಲರು ಅರಣ್ಯದೊಳಗೆ ಅಡಗಿ ಕುಳಿತಿದ್ದಾರೆ. ರಾಂಚಿಯಿಂದ ಹೆಚ್ಚುವರಿ ಪೊಲೀಸ್ ಪಡೆ ಎನ್‌ಕೌಂಟರ್ ನಡೆದ ಸ್ಥಳ ತಲುಪಿದೆ. ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿ ನಾಥು ಸಿಂಗ್ ಮೀನಾ ನೇತೃತ್ವದ ಪೊಲೀಸ್ ಪಡೆ ನಕ್ಸಲರನ್ನು ಹೆಡೆಮುರಿ ಕಟ್ಟಲು ಸಿದ್ಧವಾಗಿದೆ ಎಂದು ಡಿಐಜಿ ತಿಳಿಸಿದ್ದಾರೆ.