Friday, 13th December 2024

ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಿಷೇಧಿಸಿ ಎಸ್ಮಾ ಜಾರಿ

#YogiAdityanath

ಲಕ್ನೋ: ಉತ್ತರ ಪ್ರದೇಶದಲ್ಲಿ ಆರು ತಿಂಗಳುಗಳ ಕಾಲ ಪ್ರತಿಭಟನೆ ನಿಷೇಧಿಸಿ ಎಸ್ಮಾ ಜಾರಿ ಮಾಡಲಾಗಿದೆ. ಈ ಆದೇಶದನ್ವಯ ಯಾವುದೇ ಸರ್ಕಾರಿ ಸೇವೆ, ನಿಗಮಗಳು ಮತ್ತು ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಮುಷ್ಕರ ನಡೆಸುವಂತಿಲ್ಲ.

ಮೇ ತಿಂಗಳಲ್ಲಿ ಉತ್ತರ ಪ್ರದೇಶ ಸರ್ಕಾರ, ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ(ಎಸ್ಮಾ) ಹೇರಿ ಮುಷ್ಕರ ಗಳನ್ನು ನಿಷೇಧಿಸಿತ್ತು. ಎಸ್ಮಾ ಕಾಯ್ದೆಯಲ್ಲಿ ಸರ್ಕಾರ ಮುಷ್ಕರ ನಿರತ ಅಥವಾ ಸಾಮಾನ್ಯ ಜನಜೀವನ ನಿರ್ವಹಿಸಲು ಅಗತ್ಯವಾದ ಸೇವೆಗಳನ್ನು ನಿರಾ ಕರಿಸುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ.

ಎಸ್ಮಾ ಉಲ್ಲಂಘಿಸಿದವರನ್ನು ಪೊಲೀಸರು ಯಾವುದೇ ವಾರೆಂಟ್ ಇಲ್ಲೇ ಬಂಧಿಸಲು ಅವಕಾಶವಿದೆ. ಆಪಾದಿ ತರಿಗೆ ಒಂದು ವರ್ಷ ಜೈಲು ಅಥವಾ 1000 ರೂಪಾಯಿ ದಂಡ , ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ಈ ಕಾಯಿದೆಯನ್ನು ಕಳೆದ ವರ್ಷ ಯುಪಿ ಸರ್ಕಾರವು ಜಾರಿಗೆ ತಂದಿತು, ಇದನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಆರು ತಿಂಗಳವರೆಗೆ ವಿಸ್ತರಿಸಲಾಯಿತು. ಯುಪಿ ಸರ್ಕಾರವು ಜಾರಿಗೊಳಿಸಿದ ಎಸ್ಮಾ ಕಾಯ್ದೆಯನ್ನು ರಾಜ್ಯಪಾಲ ರಿಂದ ಅನುಮೋದನೆ ಪಡೆದ ನಂತರ ಜಾರಿಗೆ ತರಲಾಗುತ್ತದೆ.

ತಮ್ಮ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಾಜೀವ್ ರೈ ಮತ್ತು ಅವರ ಆಪ್ತ ಕಾರ್ಯದರ್ಶಿ ಜೈನೇಂದ್ರ ಯಾದವ್ ಸೇರಿದಂತೆ ಆಪ್ತ ನಾಯಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಒಂದು ದಿನದ ನಂತರ, ಅಖಿಲೇಶ್ ಯಾದವ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದರು.