Wednesday, 11th December 2024

ಮಾಜಿ ಸಂಸದ ಬುಟಾ ಸಿಂಗ್ ನಿಧನ

ನವದೆಹಲಿ : ಕೇಂದ್ರದ ಮಾಜಿ ಗೃಹ ಸಚಿವ, ಜಲೋರ್ – ಸಿರೋಹಿ ಮಾಜಿ ಸಂಸದ ಬುಟಾ ಸಿಂಗ್ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ದೆಹಲಿಯ ಏಮ್ಸ್​​ನಲ್ಲಿ ಕೊನೆಯುಸಿರೆಳೆದಿದ್ದಾರೆ.

ಜಲೋರ್-ಸಿರೋಹಿ ಸಂಸದೀಯ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಬುಟಾ ಸಿಂಗ್ ಮಾಡಿದ್ದರು. ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಸಚಿವ ಬುಟಾ ಸಿಂಗ್ ಅವರನ್ನು ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್ ) ಆಸ್ಪತ್ರೆಗೆ ದಾಖಲಿಸಿ, ಶಸ್ತ್ರಚಿಕಿತ್ಸೆ ನೀಡಲಾಗಿತ್ತು.

ಇಂದಿರಾ ಗಾಂಧಿ ಸಂಪುಟದಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಾಂಗ್ರೆಸ್ ನಾಯಕ ಇವರಾಗಿದ್ದರು. 86 ವರ್ಷದ ಬುಟಾ ಸಿಂಗ್ ಬಿಹಾರ ಮತ್ತು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿ, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಮುಖ್ಯಸ್ಥರಾಗಿ ದ್ದರು.