ಪರೀಕ್ಷೆ ರದ್ದುಗೊಳಿಸಿದ ಅಭ್ಯರ್ಥಿಗಳಿಗೆ ಹೊಸ ಪ್ರವೇಶ ಪತ್ರ ನೀಡಲಾಗು ವುದು. ಆ.12 ರಿಂದ 14 ರವರೆಗೆ ಪರೀಕ್ಷೆಗಳು ನಡೆಯ ಲಿವೆ ಎಂದು ಎನ್ಟಿಎ ಈ ಹಿಂದೆ ಘೋಷಿಸಿತ್ತು. ಅನೇಕ ಅಭ್ಯರ್ಥಿಗಳು ಹಬ್ಬಗಳು ಇರುವುದರಿಂದ ಈ ದಿನಾಂಕಗಳಲ್ಲಿ ಪರೀಕ್ಷೆ ನಡೆಸದಂತೆ ವಿನಂತಿಸಿದ್ದರು. ಈ ಕಾರಣದಿಂದಾಗಿ, ಆ.24 ಮತ್ತು 28 ರ ನಡುವೆ ಪರೀಕ್ಷೆ ನಡೆಸಲು ನಿರ್ಧರಿಸಿದೆ.
ತಾಂತ್ರಿಕ ದೋಷಗಳಿಂದಾಗಿ ಹಲವಾರು ಕೇಂದ್ರಗಳನ್ನ ರದ್ದುಗೊಳಿಸಿದ ಎರಡು ದಿನಗಳ ಬಳಿಕ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಆಗಸ್ಟ್ 6, ರಂದು ನಿಯಮಗಳನ್ನ ಪಾಲಿಸದ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.