Friday, 13th December 2024

ಕರೋನಾ ಲಸಿಕಾ ಶಿಬಿರ ಆಯೋಜಿಸಿದ ನಕಲಿ ಅಧಿಕಾರಿ ಬಂಧನ

ಕೊಲ್ಕತ : ನಕಲಿ ಐಎಎಸ್​ ಅಧಿಕಾರಿ ಎಂದು ಸೋಗು ಹಾಕಿ ಕರೋನಾ ಲಸಿಕಾ ಶಿಬಿರ ಆಯೋಜಿಸಿ ಟಿಎಂಸಿ ಸಂಸದೆ ನಟಿ ಮಿಮಿ ಚಕ್ರಬೊರ್ತಿ ಸೇರಿ ನೂರಾರು ಜನರಿಗೆ ವಂಚಿಸಿದ್ದ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ.

ಕೋಲ್ಕತದ ಕಸ್ಬಾ ನಿವಾಸಿ ದೇಬಂಜನ್ ದಾಸ್​ ಎಂಬುವ ಬಂಧಿತ ಆರೋಪಿ. ಕೋಲ್ಕತ ಮುನಿಸಿಪಲ್ ಕಾರ್ಪೊರೇಷನ್ ಜಂಟಿ ಆಯುಕ್ತ ಎಂದು ಹೇಳಿಕೊಂಡು ಲಸಿಕಾ ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿ ಹೇಳಿದ್ದ. ಅದರಂತೆ ಜನರಿಗೆ ಪ್ರೇರಣೆ ನೀಡಲು ಸಂಸದೆ ಮಿಮಿ ಚಕ್ರಬೋರ್ತಿ ಅವರನ್ನು ಆಹ್ವಾನಿಸಿದ್ದು, ಆಕೆ ಕೂಡ ಕೋವಿಶೀಲ್ಡ್​ ಲಸಿಕೆ ಪಡೆದು ಜನರನ್ನು ಪ್ರೋತ್ಸಾಹಿಸಿದ್ದರು.

ಆದರೆ ಸರ್ಕಾರದ ಕೋವಿನ್​ ಪೋರ್ಟಲ್​ನಿಂದ ಸರ್ಟಿಫಿಕೇಟ್ ಬಾರದಾಗ, ಈ ಕುರಿತು ವಿಚಾರಣೆ ನಡೆಸಿದಾಗ ನಕಲಿ ಅಧಿಕಾರಿ ಎಂದು ಬಹಿರಂಗವಾಗಿದೆ.