Wednesday, 11th December 2024

ಸುಳ್ಳು ಅತ್ಯಾಚಾರ ಪ್ರಕರಣ: ಯುವತಿಗೆ 10 ಸಾವಿರ ರೂ. ದಂಡ

ಅಲಹಾಬಾದ್‌: ಯುವಕನೋರ್ವನ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿ, ಆತನನ್ನೇ ಮದ್ವೆಯಾದ ಯುವತಿಗೆ ಅಲಾಹಾಬಾದ್ ಹೈಕೋರ್ಟ್ 10 ಸಾವಿರ ರೂ. ದಂಡ ವಿಧಿಸಿದೆ.

ಮಹಿಳೆಯೊಬ್ಬರು ದಾಖಲಿಸಿದ ಎಫ್‌ಐಆರ್ ಸುಳ್ಳು ಹಾಗೂ ಅದರಲ್ಲಿರುವ ಆರೋಪಿ ಹಾಗೂ ಸಂತ್ರಸ್ತೆ ಇಬ್ಬರೂ ಪರಸ್ಪರ ಮದ್ವೆಯಾಗಿ ಸಂತೋಷದ ಜೀವನ ವನ್ನು ನಡೆಸುತ್ತಿದ್ದಾರೆ ಎಂಬುದನ್ನು ಗಮನಿಸಿದ ಕೋರ್ಟ್, ಆರೋಪಿತ ವ್ಯಕ್ತಿ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿದೆ.

ಅಲ್ಲದೇ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವ ಮಹಿಳೆಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಮಹಿಳೆಗೆ 10 ಸಾವಿರ ರೂ ದಂಡ ವಿಧಿಸಿದೆ ಎಂದು ವರದಿಯಾಗಿದೆ.