Saturday, 5th October 2024

ಹಿಂದಿ ಹೇರಿಕೆ ಖಂಡಿಸಿ ಬೆಂಕಿ ಹಚ್ಚಿಕೊಂಡು ರೈತ ಆತ್ಮಹತ್ಯೆ

ಚೆನ್ನೈ: ತಮಿಳುನಾಡಿನ ಸೇಲಂ ಜಿಲ್ಲೆಯ 85 ವರ್ಷದ ರೈತರೊಬ್ಬರು ಹಿಂದಿ ಹೇರಿಕೆ ಖಂಡಿಸಿ ಡಿಎಂಕೆ ಕಚೇರಿ ಹೊರಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೆಟ್ಟೂರು ಪಕ್ಕದ ತಲೈಯೂರಿನಲ್ಲಿರುವ ಡಿಎಂಕೆ ಪಕ್ಷದ ಕಚೇರಿಯ ಮುಂದೆ ಹಿಂದಿ ಹೇರಿಕೆಯನ್ನು ವಿರೋಧಿಸಿ ಡಿಎಂಕೆಯ ಮಾಜಿ ಕೃಷಿ ಒಕ್ಕೂಟದ ಸಂಘಟಕ ತಂಗವೇಲ್ ಎಂಬ ರೈತರೊಬ್ಬರು ಪ್ರತಿಭಟನೆ ನಡೆಸಿದರು.

ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಿಎಂಕೆಯ ಸಕ್ರಿಯ ಸದಸ್ಯರಾಗಿದ್ದ ತಂಗವೇಲ್ ಅವರು ಹಿಂದಿಯನ್ನು ಶಿಕ್ಷಣ ಮಾಧ್ಯ ಮವಾಗಿ ತರಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರದಿದಾಗಿ ಬೇಸರಗೊಂಡಿ ದ್ದರು.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬ್ಯಾನರ್‌ನಲ್ಲಿ ತಂಗವೇಲ್, “ನಮಗೆ ಹಿಂದಿ ಬೇಡ, ನಮ್ಮ ಮಾತೃಭಾಷೆ ತಮಿಳು. ಹಿಂದಿ ವಿದೂಷಕರ ಭಾಷೆ, ಹಿಂದಿ ಭಾಷೆ ಹೇರುವುದು ವಿದ್ಯಾರ್ಥಿಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಿಂದಿ ತೊಲಗಿ, ಹಿಂದಿ ತೊಲಗಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹಿಂದಿ ತೊಲಗಿ ಎಂದು ಬರೆದುಕೊಂಡಿದ್ದರು.