Thursday, 3rd October 2024

ದೆಹಲಿಯ ಗಡಿಗಳಲ್ಲಿ ಜಿಲೇಬಿ ಹಂಚಿ ಸಂಭ್ರಮಿಸಿದ ರೈತರು

ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡು ತ್ತಿದ್ದಂತೆ ದೆಹಲಿಯ ಗಡಿಗಳಲ್ಲಿ ಪ್ರತಿಭಟನಾ ನತರ ರೈತರು ಸಿಹಿ ಹಂಚಿ ಸಂಭ್ರಮಿಸಿದರು.

ಗುರುನಾನಕ್ ಜಯಂತಿಯಂದೇ ಕೃಷಿ ಕಾಯ್ದೆ ಹಿಂಪಡೆಯುವ ನಿರ್ಧಾರ ಘೋಷಣೆ ಯು ಪಂಜಾಬ್, ಹರಿಯಾಣ ರೈತರ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ಗಾಜಿಪುರ ಗಡಿಯಿಂದ ದೆಹಲಿ-ಹರಿಯಾಣದ ಸಿಂಘು ಗಡಿವರೆಗೆ ರೈತರು ಜಿಲೇಬಿ ಹಂಚು ತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬುಟ್ಟಿಗಳಲ್ಲಿ ಸಿಹಿ ಪದಾರ್ಥಹಂಚುತ್ತಿರುವ ದೃಶ್ಯ ಕಂಡುಬಂತು.

ಗುರುನಾನಕ್ ಜಯಂತಿ ಹಿನ್ನೆಲೆಯಲ್ಲಿ ದೇಶವನ್ನು ಮಾತು ಆರಂಭಿಸಿದ ಮೋದಿ, ರೈತರಿಗೆ ಲಾಭ ಮಾಡಿಕೊಡುವ ಉದ್ದೇಶ ದಿಂದಲೇ ಕಾಯ್ದೆಗಳನ್ನು ತರಲಾಗಿತ್ತು. ಕೃಷಿ ಕಾಯ್ದೆಗಳ ಬಗ್ಗೆ ಒಂದು ವರ್ಗದ ರೈತರ ಮನವೊಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಕಾಯ್ದೆಗಳನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ.

ರೈತ ಮಿತ್ರರು ಪ್ರತಿಭಟನೆ ಕೈಬಿಟ್ಟು ತಮ್ಮ ಊರುಗಳಿಗೆ ತೆರಳಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ ಎಂದು ಮನವಿ ಮಾಡಿದರು.