Wednesday, 9th October 2024

ರೈತರು ಪ್ರತಿಭಟನೆ ಕೊನೆಗೊಳಿಸುತ್ತಿಲ್ಲ: ರಾಕೇಶ್ ಟಿಕಾಯತ್

ನವದೆಹಲಿ: ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದು, ಇದರೊಂದಿಗೆ ಸರ್ಕಾರದೊಂದಿಗೆ ಮಾತುಕತೆಗೆ ದಾರಿ ತೆರೆದಿದೆ, ಆದರೆ ರೈತರು ಪ್ರತಿಭಟನೆ ಕೊನೆಗೊಳಿಸುತ್ತಿಲ್ಲ ಎಂದು ರಾಕೇಶ್ ಟಿಕಾಯತ್ ಹೇಳಿದರು.

ವಿದ್ಯುತ್ ತಿದ್ದುಪಡಿ ವಿಧೇಯಕದ ಬಗ್ಗೆ ಸರ್ಕಾರ ಇನ್ನೂ ಮಾತನಾಡಿಲ್ಲ, ಕೇವಲ ಮೌಖಿಕ ಹೇಳಿಕೆ ನೀಡಿದೆ ಎಂದು ರೈತ ಮುಖಂಡ ಹೇಳಿದರು. ಸರಕಾರ ಈಗಲಾದರೂ ರೈತರ ಬಳಿ ಮಾತುಕತೆಗೆ ಬರಬೇಕು’ ಎಂದರು.

ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್ ಮಲಿಕ್ ಮಾತನಾಡಿ, ದೇಶ ಒಗ್ಗಟ್ಟಾಗಿದ್ದರೆ ಯಾವುದೇ ನಿರ್ಧಾರವನ್ನು ಬದಲಾಯಿ ಸಬಹುದು ಎಂಬ ದೊಡ್ಡ ಸಂದೇಶ ದೇಶಕ್ಕೆ ಹೋಗಿದೆ, ಚುನಾವಣೆಯಲ್ಲಿ ಸೋಲಿನ ಭಯದಿಂದ , ಪ್ರಧಾನಮಂತ್ರಿಯವರು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂಪಡೆದಿದ್ದಾರೆ ಎಂದರು.

ಹರ್ಯಾಣ ಗೃಹ ಸಚಿವ ಅನಿಲ್ ವಿಜ್, ‘ಇಂದು, ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ, ಇದನ್ನು ಎಲ್ಲಾ ರೈತರು ಸ್ವಾಗತಿಸಬೇಕು, ಈಗ ಅವರು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಬೇಕು’ ಎಂದು ಹೇಳಿದರು.