ಫತೇಪುರ: ಫತೇಪುರ ಜಿಲ್ಲೆಯ ಖಾಗಾ ಕೋತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಡಿದ ಅಮಲಿನಲ್ಲಿದ್ದ ತಂದೆ ತನ್ನ 9 ವರ್ಷದ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದಾರೆ.
ಆತನ ಪಕ್ಕದಲ್ಲೇ ಮಲಗಿದ್ದ ಮಗಳ ಮೇಲೆ ತಂದೆ ಕುಡಿದ ಅಮಲಿನಲ್ಲಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಅಳುತ್ತಿರುವ ಶಬ್ದ ಕೇಳಿ ಸ್ಥಳಕ್ಕೆ ಬಂದ ಆರೋಪಿಯ ಸೋದರ ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಖಾಗಾದ ಪೊಲೀಸ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಗಾಯದತ್ ಮಿಶ್ರಾ ತಿಳಿಸಿದ್ದಾರೆ.