Friday, 13th December 2024

ಗುರುವಾಯೂರು ದೇವಾಲಯದ ಆನೆ ಶಿಬಿರಕ್ಕೆ ಮಹಿಳೆ ಮ್ಯಾನೇಜರ್

ತಿರುವನಂತಪುರ: 47 ವರ್ಷಗಳ ಇತಿಹಾಸದ ಗುರುವಾಯೂರು ದೇವಾಲ ಯದ ಪ್ರಸಿದ್ಧ ಆನೆ ಶಿಬಿರದಲ್ಲಿ ಮಹಿಳೆಯೊಬ್ಬರು ಮ್ಯಾನೇಜರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

44 ಆನೆಗಳನ್ನು ಹೊಂದಿರುವ ಮತ್ತು 150 ಕ್ಕೂ ಹೆಚ್ಚು ಜನರು ಕೆಲಸ ಮಾಡುವ ಪುನ್ನತುರ್ಕೋಟಾದ ಮ್ಯಾನೇಜರ್ ಆಗಿ ಮಮ್ಮಿಯೂರ್ ಮೂಲದ ಲೆಜುಮೋಲ್ ಅವರನ್ನು ನೇಮಿಸಲಾಗಿದೆ.

ಲೆಜುಮೋಲ್ ತಂದೆ ರವೀಂದ್ರನ್ ನಾಯರ್ ಪುನ್ನತುರ್ಕೋಟದಲ್ಲಿ ಮಾವುತರಾಗಿದ್ದರು. ಆಕೆಯ ಮಾವ, ಶಂಕರನಾರಾ ಯಣನ್ ಅವರು ಇತ್ತೀಚೆಗೆ ನಿವೃತ್ತರಾದರು. ಹೋಟೆಲ್ ನಡೆಸುತ್ತಿರುವ ಅವರ ಪತಿ ಪ್ರಸಾದ್, ಪುನ್ನತುರ್ಕೊಟ್ಟಾದಲ್ಲಿ ಅಲ್ಪಾ ವಧಿಗೆ ಮಾವುತರಾಗಿ ಕೆಲಸ ಮಾಡಿದ್ದಾರೆ.

ಗುರುವಾಯೂರು ಶ್ರೀಕೃಷ್ಣನ ಭಕ್ತೆ ಸಿಆರ್ ಲೆಜುಮೋಲ್ ದೇವಸ್ಥಾನದ ಆನೆ ಗಳಿಗೆ ಹೆದರುವುದಿಲ್ಲ. ಮಾವುತಗಳ ಕುಟುಂಬದಲ್ಲಿ ಜನಿಸಿದ ಅವರು ಆನೆಗಳ ಕುರಿತು ಪ್ರೀತಿ ಹೊಂದಿದ್ದಾರೆ. ಆನೆಗಳಿಗೆ ಆಹಾರ ನೀಡುವುದು ಅವರ ಇಷ್ಟದ ಕೆಲಸಗಳಲ್ಲೊಂದಾಗಿದೆ. ಇದು ಭಗವಂತನ ಆಶೀರ್ವಾದ ಎಂದು ಗುರುವಾ ಯೂರ್ ದೇವಸ್ಥಾನದ ಪುನ್ನತ್ತೂರು ಕೊಟ್ಟಾ ಉಸ್ತುವಾರಿ ವಹಿಸಿಕೊಂಡ ಲೆಜುಮೋಲ್ ಹೇಳುತ್ತಾರೆ. ಆನೆ ಶಿಬಿರದ 47 ವರ್ಷಗಳ ಇತಿಹಾಸದಲ್ಲಿ ಅವರು ಮೊದಲ ಮಹಿಳಾ ನಿರ್ವಾಹಕರಾಗಿದ್ದಾರೆ.

ಪುನ್ನತ್ತೂರು ಕೊಟ್ಟಾ 44 ಆನೆಗಳನ್ನು ಹೊಂದಿದೆ, ಇವುಗಳನ್ನು ಭಕ್ತರು ವಿವಿಧ ಕಾಲಗಳಲ್ಲಿ ದಾನವಾಗಿ ನೀಡಿದ್ದಾರೆ. ಲೆಜುಮೋಲ್ ಆನೆಗಳ ಪಾಲನೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

1996ರಲ್ಲಿ ಗುರುವಾಯೂರು ದೇವಸ್ವಂನಲ್ಲಿ ಲೋವರ್ ಡಿವಿಷನ್ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿದ್ದ ಲೆಜುಮೋಲ್ ಕೋಟಾದ ಜವಾಬ್ದಾರಿ ವಹಿಸುವ ಮುನ್ನ ಕಾಮಗಾರಿ ವಿಭಾಗದಲ್ಲಿ ಸಹಾಯಕ ವ್ಯವಸ್ಥಾಪಕರಾಗಿದ್ದರು. “ಗುರುವಾಯೂರಪ್ಪನವರ ಆನೆಗಳನ್ನು ನೋಡಿಕೊಳ್ಳುವುದು ಒಂದು ದೊಡ್ಡ ಸೌಭಾಗ್ಯ. ಮುಂದಿನ ತಿಂಗಳು ಆನೆಗಳಿಗೆ ಆಯುರ್ವೇದ ನವ ಯೌವನ ಪಡೆಯುವ ಚಿಕಿತ್ಸೆ ನೀಡಲಾಗುವುದು” ಎಂದು ಲೆಜುಮೋಲ್ ತಿಳಿಸಿದರು.ಲೆಜುಮೋಲ್ ಅವರ ಮಕ್ಕಳಾದ ಅಕ್ಷಯ್ ಕೃಷ್ಣನ್ ಮತ್ತು ಅನಂತಕೃಷ್ಣನ್ ಕೂಡ ತಮ್ಮ ತಾಯಿಯ ಹೊಸ ಕೆಲಸದ ಬಗ್ಗೆ ಥ್ರಿಲ್ ಆಗಿದ್ದಾರೆ.