ಕರ್ನಾಟಕ ಸೇರಿದಂತೆ ಉತ್ತರ ಪ್ರದೇಶ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಹಿಲಾಲ್ ಸಮಿತಿಗಳು ಈದ್-ಉಲ್-ಫಿತರ್ ಅನ್ನು ಮಂಗಳವಾರ ಆಚರಿಸಲು ನಿರ್ಧರಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಯೂ ಚಂದ್ರನ ದರ್ಶನವಾಗಿಲ್ಲ ಎಂದು ತಿಳಿದುಬಂದಿದೆ.
ಈದ್ ಅನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನ ಹತ್ತನೇ ತಿಂಗಳ ಮೊದಲ ದಿನದಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ರಂಜಾನ್ ಕೊನೆಯಲ್ಲಿ ತಿಂಗಳ ಉಪವಾಸ ಮುರಿಯುವ ಹಬ್ಬ ಎಂದೂ ಕರೆಯುತ್ತಾರೆ. ರಂಜಾನ್‌ನ ಕೊನೆಯ ದಿನ ಚಾಂದ್ ರಾತ್‌ನಲ್ಲಿ ಚಂದ್ರನ ದರ್ಶನದವರೆಗೆ ಒಂದು ತಿಂಗಳು ಪೂರ್ತಿ ಉಪವಾಸ ಆಚರಿಸು ವುದು ಮುಂದುವರೆದಿರುತ್ತದೆ.
ಇಸ್ಲಾಂ ಧರ್ಮವನ್ನು ಆಚರಿಸುವ ಜನರು ಅಲ್ಲಾಹನಿಂದ ಶಾಂತಿ ಮತ್ತು ಆಶೀರ್ವಾದ ಪಡೆಯಲು ಧನ್ಯವಾದ ಗಳನ್ನು ಅರ್ಪಿಸಲು ಇಡೀ ತಿಂಗಳನ್ನು ಮೀಸಲಿಡುತ್ತಾರೆ.