Friday, 13th December 2024

ಕೋಯಿಕ್ಕೋಡ್’ನಲ್ಲಿ ವೆಸ್ಟ್ ನೈಲ್ ಫೀವರ್‌ನ ಐದು ಪ್ರಕರಣ ಪತ್ತೆ

ಕೋಯಿಕ್ಕೋಡ್(ಕೇರಳ): ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ವೆಸ್ಟ್ ನೈಲ್ ಫೀವರ್‌ನ ಐದು ಪ್ರಕರಣಗಳು ಪತ್ತೆಯಾಗಿವೆ.

ಅವರ ಆರೋಗ್ಯ ಸ್ಥಿತಿ ಸಹಜವಾಗಿದ್ದು, ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳು ವಾಸವಿರುವ ಮನೆಗಳ ಸುತ್ತ ಬೇರೆ ಯಾರಲ್ಲೂ ಜ್ವರ ಕಂಡುಬಂದಿಲ್ಲ ಎಂದು ಜಿಲ್ಲಾ ಕಣ್ಗಾವಲು ತಂಡದ ಅಧಿಕಾರಿ ಹೇಳಿದ್ದಾರೆ. ಒಬ್ಬ ವ್ಯಕ್ತಿಯಲ್ಲಿ ಮಾತ್ರ ಸೋಂಕು ಕಂಡುಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ರೋಗದ ಲಕ್ಷಣ ಕಂಡುಬಂದಿದ್ದವರ ಪ್ರಯೋಗಾಲಯ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಣು ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅದರ ವರದಿ ಬಂದಿದ್ದು, ಐವರು ವೆಸ್ಟ್ ನೈಲ್ ಫೀವರ್‌ನಿಂದ ಬಳಲುತ್ತಿರುವುದು ಗೊತ್ತಾಗಿದೆ. ಈ ಜ್ವರ ಸೊಳ್ಳೆಗಳಿಂದ ಹರಡುತ್ತದೆ ಎಂದು ಹೇಳಿದ್ದಾರೆ.

1937ರಲ್ಲಿ ಮೊದಲ ಬಾರಿಗೆ ಉಗಾಂಡಾದಲ್ಲಿ ಈ ಜ್ವರ ಪತ್ತೆಯಾಗಿತ್ತು. 2011ರಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. 2019ರಲ್ಲಿ ಮಲ್ಲಪ್ಪುರಂ ನಲ್ಲಿ ಒಬ್ಬ ಬಾಲಕ ಜ್ವರದಿಂದ ಮೃತಪಟ್ಟಿದ್ದ. ಮೇ 2022ರಲ್ಲಿ ತ್ರಿಶೂರ್‌ನಲ್ಲಿ 47 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದರು.