Saturday, 14th December 2024

ಜಮ್ಮು: ಅರ್ನಿಯಾ ಸೆಕ್ಟರ್’ನಲ್ಲಿ ಡ್ರೋನ್‌ ಪತ್ತೆ

ಜಮ್ಮು : ಜಮ್ಮುವಿನಲ್ಲಿ ಡ್ರೋನ್ ಹಾರಾಟ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದು, ಶುಕ್ರವಾರ ಅರ್ನಿಯಾ ಸೆಕ್ಟರ್ ನ ಅಂತರರಾಷ್ಟ್ರೀಯ ಗಡಿಯ ಬಳಿ ಡ್ರೋನ್ ಕಾಣಿಸಿಕೊಂಡಿದೆ.

ಜಮ್ಮುವಿನ ವಾಯುಪಡೆ ನಿಲ್ದಾಣದಲ್ಲಿ ಅವಳಿ ಸ್ಫೋಟಗಳು ನಡೆದ ನಂತರ ಜಮ್ಮುವಿನ ಬಳಿ ಡ್ರೋನ್ ಸುಳಿದಾಡುತ್ತಿರುವುದು ಐದನೇ ಬಾರಿಯಾಗಿದೆ.

ಡ್ರೋನ್ ಗಡಿಯ ಬೇಲಿಯ ಬಳಿ ಕಂಡುಬಂದಿದೆ. ಆದಾಗ್ಯೂ, ಅದು ಗಡಿ ದಾಟಲಿಲ್ಲ ಎಂದು ತಿಳಿದು ಬಂದಿದೆ. ಯಾವುದೇ ಅನಾಹುತ ತಪ್ಪಿಸಲು, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಡ್ರೋನ್ ಮೇಲೆ ಗುಂಡು ಹಾರಿಸಿದರು. ನಂತರ ಡ್ರೋನ್ ಸ್ವಲ್ಪ ಸಮಯದವರೆಗೆ ಪ್ರದೇಶದ ಮೇಲೆ ಸುಳಿದಾಡಿದ ನಂತರ ಸ್ಥಳದಿಂದ ಕಣ್ಮರೆಯಾಯಿತು.