Wednesday, 11th December 2024

ಅರ್ನಬ್​ ಗೋಸ್ವಾಮಿ ಮಾಲೀಕತ್ವದ ಬ್ರಿಟನ್​​ನ ರಿಪಬ್ಲಿಕ್​ ಭಾರತ್​ಗೆ ದಂಡ

ನವದೆಹಲಿ: ಪಾಕಿಸ್ತಾನದ ಜನರ ವಿರುದ್ಧ ದ್ವೇಷ ಬಿತ್ತುವ ಕಾರ್ಯ ಮಾಡಿದೆ ಎಂಬ ಆರೋಪದಡಿಯಲ್ಲಿ ಬ್ರಿಟನ್​​ನಲ್ಲಿ ಅರ್ನಬ್​ ಗೋಸ್ವಾಮಿ ಮಾಲೀಕತ್ವದ ರಿಪಬ್ಲಿಕ್​ ಭಾರತ್​ಗೆ ಬರೋಬ್ಬರಿ 19,79,327.32 ರೂಪಾಯಿ(ಇಪ್ಪತ್ತು ಸಾವಿರ ಬ್ರಿಟನ್‌ ಪೌಂಡ್‌) ದಂಡ ವಿಧಿಸಲಾಗಿದೆ.

ರಿಪಬ್ಲಿಕ್​ ಭಾರತ್​ ಲೈಸೆನ್ಸ್ ಹೊಂದಿರುವ ವರ್ಲ್ಡ್​ ವೀವ್​​ ಮೀಡಿಯಾ ನೆಟ್​​ವರ್ಕ್​ ಲಿಮಿಟೆಡ್​​ಗೆ ಆಫ್​ಕಾಮ್​​​ 20 ಲಕ್ಷ ರೂಪಾಯಿ ದಂಡ ವಿಧಿಸಿದೆ. ಬ್ರಿಟನ್​​ನಲ್ಲಿರುವ ಹಿಂದಿ ಮಾತನಾಡುವ ಜನರನ್ನ ಗುರಿಯಾಗಿಸಿ ದ್ವೇಷದ ಬೀಜ ಬಿತ್ತುವ ಮೂಲಕ ಆಫ್​ಕಾಮ್​ ಬ್ರಾಡ್​ಕಾಸ್ಟಿಂಗ್​ ಕೋಡ್​ ನಿಯಮಗಳನ್ನ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಅರ್ನಬ್​ ಗೋಸ್ವಾಮಿ ನಿರೂಪಣೆ ಮಾಡಿದ ‘ಪೂಚತಾ ಹೈ ಭಾರತ್’ ಎಂಬ ಕಾರ್ಯಕ್ರಮದ 6 ಸೆಪ್ಟೆಂಬರ್​ 2019ರ ವರದಿಯನ್ನ ಆಧರಿಸಿ ಈ ದಂಡವನ್ನ ವಿಧಿಸಲಾಗಿದೆ.